LOCAL NEWS : ಕುಕನೂರು |ಇಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು : 110/11 ಕೆ.ವಿ ಮಂಗಳೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಮಾರ್ಚ್ 13ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಮಂಗಳೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಎಫ್–12 ಕದ್ರಳ್ಳಿ ಐಪಿ, ಎಫ್–2 ಮುತ್ತಾಳ ನಿರಂತರಜ್ಯೋತಿ, ಎಫ್–3 ಬೇವೂರ ಐಪಿ, ಎಫ್–10 ಚಂಡಿನಾಳ ಐಪಿ, ಎಫ್–4 ಮಂಗಳೂರು ನಿರಂತರಜ್ಯೋತಿ, ಎಫ್–5 ಕುದ್ರಿಮೋತಿ ಐಪಿ, ಎಫ್–7 ನೆಲಜೇರಿ ಐಪಿ ಹಾಗೂ ಎಫ್–8 ಬೈರನಾಯಕನಹಳ್ಳಿ ಐಪಿ ಫೀಡರ್‌ಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಮಂಗಳೂರು, ಕುದ್ರಿಮೋತಿ, ಬೈರನಾಯಕನಹಳ್ಳಿ, ಚಂಡಿನಾಳ, ಚಿಕ್ಕಬೀಡನಾಳ, ಹೀರೆಬೀಡನಾಳ, ಕದ್ರಳ್ಳಿ, ಹೋನ್ನೂರಸಿ, ಶಿರೂರು, ಅರಕೇರಿ, ನೆಲಜೇರಿ, ಮ್ಯಾದನೇರಿ, ಮುತ್ತಾಳ ಮತ್ತು ವಟಪರ್ವಿ ಸೇರಿದಂತೆ ಹಲವು ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ.
ನಿರ್ವಹಣಾ ಕಾಮಗಾರಿ ಮುಕ್ತಾಯವಾದ ಕೂಡಲೇ ವಿದ್ಯುತ್ ಸರಬರಾಜು ಪುನರಾರಂಭಿಸಲಾಗುವುದು.
ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ರೀತಿಯ ದುರಸ್ತಿ ಕೆಲಸಗಳನ್ನು ಕೈಗೊಳ್ಳಬಾರದು ಎಂದು ಜೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.