ಮುದಗಲ್ಲ :- ಸಮಾಜದಲ್ಲಿ ಸೌಹಾರ್ದ ಬದುಕು ಕಲಿಯುವುದೇ ಇಫ್ತಾರ್‌ ಕೂಟ ;-ಮಹಾಂತ ಸ್ವಾಮೀಜಿ ಸಾಲಿಮಠ..

ಮುದಗಲ್ಲ ವರದಿ..

ಸಮಾಜದಲ್ಲಿ ಸೌಹಾರ್ದ ಬದುಕು ಕಲಿಯುವುದೇ ಇಫ್ತಾರ್‌ ಕೂಟ ;-ಮಹಾಂತ ಸ್ವಾಮೀಜಿ ಸಾಲಿಮಠ..

ಮುದಗಲ್ಲ : ಪ್ರತಿಯೊಂದು ಧರ್ಮಗಳು ಒಳ್ಳೆಯ ವಿಚಾರ
ಬೋಧಿಸುತ್ತವೆ.ಇಸ್ಲಾಂ ಧರ್ಮದ ಪ್ರವಾದಿ ಮಹ್ಮದ ಪೈಗಂಬರ್
ಅವರು ಸೌಹಾರ್ದ ಬೆಸೆಯುವ ಕಾರ್ಯ ಮಾಡಿದ್ದಾರೆ.ರಂಜಾನ್
ಒಂದು ತಿಂಗಳು ಶಾಂತಿ ಯ ಪ್ರತೀಕ ಇಫ್ತಾರ ಕೂಟದಿಂದ ಎಲ್ಲರೂ ಒಂದಾಗಿ ಸಹೋದರತೆ, ಸಮಾನತೆ, ಭಾತೃತ್ವ,ಭಾವೈಕ್ಯತೆ,ಸಮಾನತೆ,ಮನುಷ್ಯ ಪ್ರಜ್ಞೆ ಬೆಳೆಸುವ ಸಾರಸ್ಯದ ಸಂಕೇತ ಹಾಗೂ ʼಪವಿತ್ರ ರಂಜಾನ್ ಮಾಸದಲ್ಲಿ ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳಲು ಇಂತಹ ಸೌಹಾರ್ದತೆಯ ಕೂಟಗಳು ಅತ್ಯಂತ ಅವಶ್ಯಕವಾಗಿವೆ ನಮ್ಮ ಐತಿಹಾಸಿಕ ಮುದಗಲ್ಲ ಪಟ್ಟಣದಲ್ಲಿ ಹಿರಿಯರು ಹಿಂದಿನಿಂದಲೂ ಎಲ್ಲಾ ಸಮುದಾಯದವರು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದಿಂದ ಬದುಕಿದ್ದಾರೆ. ಅದೇ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿ ಯುವಕರ ಮೇಲಿದೆʼ ಎಂದು ಖ್ಯಾತ ಪ್ರವಚನಕಾರ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ಅಭಿಮತಪಟ್ಟರು.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಬಲಪಡಿಸುವ ಉದ್ದೇಶದಿಂದ ಜಮಾತ್ -ಏ- ಇಸ್ಲಾಮಿ-ಹಿಂದ್ ಮಸೀದಿಯಲ್ಲಿ ಸೌಹಾರ್ದ ಇಫ್ತಾರ್‌ ಕೂಟ  ಆಯೋಜಿಸಲಾಯಿತು.

ಖ್ಯಾತ ಪ್ರವಚನಕಾರ ಲಾಲಹುಸೇನ ಕಂದಗಲ್ಲ ಸಲಹೆ ಧರ್ಮಗಳನ್ನು ಗೌರವಿಸುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಿ:- ಖ್ಯಾತ ಪ್ರವಚನಕಾರ ಲಾಲಹುಸೇನ ಕಂದಗಲ್ಲ..

ಲಾಲ್ ಹುಸೇನ್ ಕಂದಗಲ್ ಸಮಾರಂಭದಲ್ಲಿ ಮಾತನಾಡಿ ಜಗತ್ತಿನಲ್ಲಿರುವ ಎಲ್ಲ ಧರ್ಮಗಳು ಪ್ರೀತಿ ಮತ್ತು ಶಾಂತಿಯನ್ನೇ ಬೋಧಿಸಿವೆ ಪ್ರತಿಯೊಬ್ಬರು ತಮ್ಮ ಧರ್ಮಗಳನ್ನು ಪ್ರೀತಿಸುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸುವ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳುವ ಅಗತ್ಯ ಇದೆ

ದೇವಭಯದ ಗುಣ ಬೆಳಸಲಿಕ್ಕಾಗಿ ಮುಸ್ಲಿಂರ ಮೇಲೆ ರಮಜಾನ್ ಉಪವಾಸ ವೃತಗಳನ್ನು ಕಡ್ಡಾಯಗೊಳಿಸಲಾಗಿದೆ. ನಾನು ಎಲ್ಲಿದ್ದರೂ ನನ್ನ ಸೃಷ್ಟಿಕರ್ತ ನನ್ನನ್ನು ನೋಡುತ್ತಿದ್ದಾನೆ ಎಂಬ ಪ್ರಜ್ಞೆ ಒಬ್ಬ ವ್ಯಕ್ತಿಯಲ್ಲಿ ಬಂದಾಗ ಅವನು ಎಲ್ಲ ರೀತಿಯ ಕೆಡುಕು ಮತ್ತು ಅಪರಾಧಗಳಿಂದ ಉಳಿಯುತ್ತಾನೆ. ಉಪವಾಸ ವೃತ್ತಗಳ ಮೂಲಕ ಒಬ್ಬ ವ್ಯಕ್ತಿಯಲ್ಲಿ ಹಸಿವಿನ ಅರಿವನ್ನು ಮೂಡಿಸಲಾಗುತ್ತದೆ ಬಡವರ ಕಷ್ಟಗಳಿಗೆ ಸ್ಪಂದಿಸುವ ಗುಣ ಇದರಿಂದ ಬೆಳೆಯುತ್ತದೆ.ರಮಜಾನ ಕರುಣೆ, ಸಹಾನುಭೂತಿಯ ಮಾಸವಾಗಿದೆ. ಭೂಮಿಯ ಮೇಲೆ ಇರುವಷ್ಟು ದಿನ ಒಳ್ಳೆಯ ವ್ಯಕ್ತಿ ಗಳಾಗಿ ಬದುಕಬೇಕು ನಾವೆಲ್ಲರೂ ಒಂದು ದಿನ ಈ ಜಗತ್ತನ್ನು ತೊರೆಯಬೇಕಾಗಿದೆ ಆ ದೇವನು ನಾವು ಮಾಡಿದ ಎಲ್ಲ ಕರ್ಮಗಳ ಲೆಕ್ಕವನ್ನು ನಮ್ಮಿಂದ ಪಡೆಯಲಿಕ್ಕಿದ್ದಾನೆ ಎಂಬ ಜಾಗೃತ ಪ್ರಜ್ಞೆಯೊಂದಿಗೆ ನಾವೆಲ್ಲರೂ ಬದುಕಬೇಕಾಗಿದೆ
ಎಂದರು.

ನಂತರ ಮಾತನಾಡಿದ ಪುರಸಭೆ ಯ ಮಾಜಿ ಸದಸ್ಯರಾದ ಎಸ್ ಆರ್ ರಸೂಲ್ ಸಾಬ ಅವರು ಎಲ್ಲಾ ಧರ್ಮೀಯರು ಒಂದಾಗಿ ಸೌಹಾರ್ದದಿಂದ ಬದುಕಿದಾಗ ಮಾತ್ರ ದೇಶದಲ್ಲಿ ಶಾಂತಿ ಹಾಗೂ ಸುಭಿಕ್ಷೆ ಬರಲು ಸಾಧ್ಯ ಇಂತಹ ಸೌಹಾರ್ದ ಕಾರ್ಯಕ್ರಮ ಆಯೋಜಿಸಿದ ಸಂಘಟಕರಿಗೆ ಅಭಿನಂದಿಸುತ್ತೇವೆ ಎಂದರು. 

ವೇದಿಕೆ ಕಾರ್ಯಕ್ರಮದ ನಂತರ ಸಾಮೂಹಿಕ ಇಫ್ತಾರದ ವ್ಯವಸ್ಥೆಯನ್ನು ಮಾಡಲಾಗಿತ್ತು

ಈ ಸಂದರ್ಭದಲ್ಲಿ ಪುರಸಭೆ ಯ ಮುಖ್ಯಾಧಿಕಾರಿ ಪ್ರವೀಣ್ ಬೋಗರ್ ,ಮಸೀದಿಯಲ್ಲಿ ಅಧ್ಯಕ್ಷರು ಸೇರಿ ಸರ್ವ ಸಮಾಜದ ಗಣ್ಯರು ಹಿರಿಯರು ಉಪಸ್ಥಿತರಿದ್ದರು

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!