You are currently viewing BIG NEWS : ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ! : ವಿಶ್ವ ನಾಯಕ, ಬಲಿಷ್ಠ ಪ್ರಧಾನಿ ಮೋದಿಯ ಸಾಧನೆ!

BIG NEWS : ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ! : ವಿಶ್ವ ನಾಯಕ, ಬಲಿಷ್ಠ ಪ್ರಧಾನಿ ಮೋದಿಯ ಸಾಧನೆ!

BIG NEWS : ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ! : ವಿಶ್ವ ನಾಯಕ, ಬಲಿಷ್ಠ ಪ್ರಧಾನಿ ಮೋದಿಯ ಸಾಧನೆ!

PV ನ್ಯೂಸ್ ಡಿಜಿಟಲ್ : 

ಪ್ರಜಾವೀಕ್ಷಣೆ ಡಿಜಿಟಲ್ ಡಸ್ಕ್ : ಆರ್ಥಿಕ ಜಗತ್ತಿನಲ್ಲಿ ದೊಡ್ಡದೊಂದು ಮಹತ್ವದ ಬದಲಾವಣೆ ದಾಖಲಾಗಿದೆ. ನೆರೆಯ ರಾಷ್ಟ್ರವಾದ ಬಾಂಗ್ಲಾದೇಶವು ಪ್ರತಿ ವ್ಯಕ್ತಿ ಜಿಡಿಪಿ (ತಲಾ ಆದಾಯ) ದರದಲ್ಲಿ ಭಾರತವನ್ನು ಹಿಂದಿಕ್ಕುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. 2026ರ ಆರ್ಥಿಕ ಸಾಲಿನಲ್ಲಿ ಮೊದಲ ಬಾರಿಗೆ ಈ ವಿದ್ಯಮಾನ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

​ಇತ್ತೀಚಿನ ಆರ್ಥಿಕ ಅಂಕಿ-ಅಂಶಗಳ ಪ್ರಕಾರ, ಬಾಂಗ್ಲಾದೇಶದ ಪ್ರತಿ ವ್ಯಕ್ತಿ ಜಿಡಿಪಿ $2,911 ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಭಾರತದ ಪ್ರತಿ ವ್ಯಕ್ತಿ ಜಿಡಿಪಿ ದರವು $2,813 ರಷ್ಟಿದೆ. ಈ ಮೂಲಕ ಬಾಂಗ್ಲಾದೇಶವು ಭಾರತಕ್ಕಿಂತ ತಲಾ ಆದಾಯದಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ವಿಶ್ವ ವಿಖ್ಯಾತ, ವಿಶ್ವ ನಾಯಕ, ವಿಶ್ವಗುರು ಎಂದೆ ಕರೆಸಿಕೊಳ್ಳುವ ಬಲಿಷ್ಠ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕತೆಯ ಸಾಧನೆ ಜಗತ್ ಜಾಹಿರಾಗಿದೆ ಎಂದು ಹೇಳಬಹುದು.

ಆರ್ಥಿಕ ಬೆಳವಣಿಗೆಯ ಸಂಕೇತ : 

​ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶವು ಉದ್ಯಮ, ರಫ್ತು ಮತ್ತು ಉತ್ಪಾದನಾ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಾ ಬಂದಿದೆ. ವಿಶೇಷವಾಗಿ ಜವಳಿ (Textile) ಮತ್ತು ಸಿದ್ಧ ಉಡುಪುಗಳ ರಫ್ತು ವಲಯದಲ್ಲಿ ಬಾಂಗ್ಲಾದೇಶ ಸಾಧಿಸಿದ ಮುನ್ನಡೆ ಅದರ ಜಿಡಿಪಿ ದರ ಹೆಚ್ಚಾಗಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

​2026ರಲ್ಲಿ ದಾಖಲಾಗಿರುವ ಈ ಆರ್ಥಿಕ ಸ್ಥಿತ್ಯಂತರವು ದಕ್ಷಿಣ ಏಷ್ಯಾದ ಆರ್ಥಿಕ ಸಮೀಕರಣಗಳಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ಭಾರತದ ಆರ್ಥಿಕ ನೀತಿ ನಿರೂಪಕರು ಮತ್ತು ತಜ್ಞರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Leave a Reply

error: Content is protected !!