You are currently viewing ಗೋಮಾತೆ ಕೇವಲ ರಾಜಕೀಯಕ್ಕಷ್ಟೇ ಸೀಮಿತವೇ?: ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸಾವಿರಾರು ಹಸುಗಳ ದುರ್ಮರಣ; ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು, ಮೂಕಪ್ರೇಕ್ಷಕರಾದ ಗೋರಕ್ಷಕರು!!

ಗೋಮಾತೆ ಕೇವಲ ರಾಜಕೀಯಕ್ಕಷ್ಟೇ ಸೀಮಿತವೇ?: ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸಾವಿರಾರು ಹಸುಗಳ ದುರ್ಮರಣ; ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು, ಮೂಕಪ್ರೇಕ್ಷಕರಾದ ಗೋರಕ್ಷಕರು!!

ಗೋಮಾತೆ ಕೇವಲ ರಾಜಕೀಯಕ್ಕಷ್ಟೇ ಸೀಮಿತವೇ?: ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸಾವಿರಾರು ಹಸುಗಳ ದುರ್ಮರಣ; ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು, ಮೂಕಪ್ರೇಕ್ಷಕರಾದ ಗೋರಕ್ಷಕರು!!

PV ನ್ಯೂಸ್‌ ಡಿಜಿಟಲ್‌ : 

​ಜೈಸಲ್ಮೇರ್ (ರಾಜಸ್ಥಾನ), ಮೇ 26 : ದೇಶದಲ್ಲಿ ಗೋರಕ್ಷಣೆ ಮತ್ತು ಗೋಮಾತೆಯ ಹೆಸರಿನಲ್ಲಿ ದೊಡ್ಡ ಮಟ್ಟದ ರಾಜಕೀಯ ಮತ್ತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ವಾಸ್ತವ ನೆಲೆಯಲ್ಲಿ ಗೋವುಗಳ ಸ್ಥಿತಿ ಎಷ್ಟು ದಯನೀಯವಾಗಿದೆ ಎಂಬುದಕ್ಕೆ ರಾಜಸ್ಥಾನದ ಜೈಸಲ್ಮೇರ್‌ನಿಂದ ಬಂದಿರುವ ಈ ವೀಡಿಯೊ ಸಾಕ್ಷಿಯಾಗಿದೆ.

ರಾಜಸ್ಥಾನದ ಜೈಸಲ್ಮೇರ್ ಜಿಲ್ಲಾ ಕೇಂದ್ರದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಪುರಸಭೆಯ ಕಸದ ಡಂಪಿಂಗ್ ಯಾರ್ಡ್‌ನಲ್ಲಿ 300 ಕ್ಕೂ ಹೆಚ್ಚು ಹಸುಗಳ ಕಳೇಬರಗಳು ಪತ್ತೆಯಾಗಿವೆ. ಅವುಗಳ ಕಳೇಬರಗಳು ಕೊಳೆತು ನಾರುತ್ತಿರುವ ಅತ್ಯಂತ ಕಳವಳಕಾರಿ ದೃಶ್ಯ ಬೆಳಕಿಗೆ ಬಂದಿದೆ.

​ಹರಡುತ್ತಿರುವ ಸಾಂಕ್ರಾಮಿಕ ರೋಗದ ಭೀತಿ: ​ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ನೂರಾರು ಹಾಗೂ ಸಾವಿರಾರು ಸಂಖ್ಯೆಯ ಹಸುಗಳು ಮತ್ತು ಕರುಗಳು ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳ ರಾಶಿಯ ಮಧ್ಯೆ ಮೃತಪಟ್ಟು ಬಿದ್ದಿರುವುದನ್ನು ಕಾಣಬಹುದು. ಮೃತದೇಹಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದ ಕಾರಣ, ಇಡೀ ಪ್ರದೇಶವು ದುರ್ವಾಸನೆಯಿಂದ ಕೂಡಿದೆ. ಹದ್ದು ಮತ್ತು ಕಾಗೆಗಳು ಕಳೇಬರಗಳನ್ನು ತಿನ್ನುತ್ತಿದ್ದು, ಈ ಪರಿಸ್ಥಿತಿಯು ಇಡೀ ಜೈಸಲ್ಮೇರ್ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ಸೃಷ್ಟಿಸಿದೆ.


​ಸಾರ್ವಜನಿಕರ ಆಕ್ರೋಶ – ಮೂಕಪ್ರೇಕ್ಷಕರಾದ ಗೋರಕ್ಷಕರು!

  ಸಾಮಾನ್ಯವಾಗಿ ಗೋರಕ್ಷಣೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಕಾನೂನು ಮತ್ತು ಧರ್ಮದ ಪಾಠ ಮಾಡುವ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ವಯಂಘೋಷಿತ ಗೋರಕ್ಷಕರು ಈ ಮಹಾ ದುರಂತದ ಬಗ್ಗೆ ಸಂಪೂರ್ಣ ಮೌನ ವಹಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜಸ್ತಾನದಲ್ಲಿ ಬಿಜೆಪಿ ಸರ್ಕಾರವಿದ್ದು, ಈ ದುರಂತ ನಡೆದಿದೆ ಎಂಬುವುದು ವಿಪರ್ಯಾಸ. “ಗೋಮಾತೆಯ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರು, ಸಾವಿರಾರು ಹಸುಗಳು ಹೀಗೆ ಅನಾಥವಾಗಿ ಸತ್ತು ಕೊಳೆಯುತ್ತಿದ್ದರೂ ಏಕೆ ಧ್ವನಿ ಎತ್ತುತ್ತಿಲ್ಲ?” ಎಂದು ಸ್ಥಳೀಯ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

​ಸಾವಿಗೆ ನಿಖರ ಕಾರಣವೇನು?

ಸ್ಥಳೀಯ ಮೂಲಗಳ ಪ್ರಕಾರ, ಜೈಪುರ ಮತ್ತು ಜೈಸಲ್ಮೇರ್ ಸುತ್ತಮುತ್ತಲಿನ ಭಾಗಗಳಲ್ಲಿ ಹರಡಿರುವ ಯಾವುದೋ ಮಾರಕ ಕಾಯಿಲೆ (ಲಂಪಿ ರೋಗ ಅಥವಾ ಇನ್ಯಾವುದೇ ಸಾಂಕ್ರಾಮಿಕ) ಅಥವಾ ಕಸದ ರಾಶಿಯಲ್ಲಿರುವ ಪ್ಲಾಸ್ಟಿಕ್ ಕವರ್‌ಗಳನ್ನು ತಿನ್ನುವುದರಿಂದ ಈ ಗೋವುಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಹಸುಗಳು ಅನಾರೋಗ್ಯಕ್ಕೆ ಒಳಗಾದಾಗ ಅಥವಾ ಮೃತಪಟ್ಟಾಗ ಮುನ್ಸಿಪಲ್ ಸಿಬ್ಬಂದಿ ಅವುಗಳನ್ನು ತಂದು ಈ ಕಸದ ಜಾಗಕ್ಕೆ ಬೇಕಾಬಿಟ್ಟಿ ಎಸೆದು ಹೋಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

​ಆಡಳಿತ ಮಂಡಳಿಯ ನಿರ್ಲಕ್ಷ್ಯ!

​ಈ ದೃಶ್ಯಗಳು ಸ್ಥಳೀಯ ಆಡಳಿತ ಮತ್ತು ಪಶುಸಂಗೋಪನಾ ಇಲಾಖೆಯ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತವೆ. ಹಸುಗಳ ರಕ್ಷಣೆಗಾಗಿ ಮತ್ತು ಗೋಶಾಲೆಗಳಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದ್ದರೂ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಸುಗಳು ಸಾವನ್ನಪ್ಪುತ್ತಿರುವುದು ವ್ಯವಸ್ಥೆಯ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿದು ಬಂದಿದೆ.

Leave a Reply

error: Content is protected !!