You are currently viewing LOCAL NEWS : ಫಲವತ್ತಾದ ಕೃಷಿಭೂಮಿಗೆ ಸೋಲಾರ್–ವಿಂಡ್ ಯೋಜನೆಗಳ ಕಾಟ! : ಶಾಸಕ ರಾಯರೆಡ್ಡಿ ‘ಕುರುಡು ಜಾಣತನದ ಮೌನ’ : ಎಸ್.ವಿ. ಸೋಮರೆಡ್ಡಿ ಗಂಭೀರ ಆರೋಪ!

LOCAL NEWS : ಫಲವತ್ತಾದ ಕೃಷಿಭೂಮಿಗೆ ಸೋಲಾರ್–ವಿಂಡ್ ಯೋಜನೆಗಳ ಕಾಟ! : ಶಾಸಕ ರಾಯರೆಡ್ಡಿ ‘ಕುರುಡು ಜಾಣತನದ ಮೌನ’ : ಎಸ್.ವಿ. ಸೋಮರೆಡ್ಡಿ ಗಂಭೀರ ಆರೋಪ!

LOCAL NEWS : ಫಲವತ್ತಾದ ಕೃಷಿಭೂಮಿಗೆ ಸೋಲಾರ್–ವಿಂಡ್ ಯೋಜನೆಗಳ ಕಾಟ! : ಶಾಸಕ ರಾಯರೆಡ್ಡಿ ‘ಕುರುಡು ಜಾಣತನದ ಮೌನ’ : ಎಸ್.ವಿ. ಸೋಮರೆಡ್ಡಿ ಗಂಭೀರ ಆರೋಪ!

 

ಕುಕನೂರು, ಜು. 10 | PV NEWS ಕನ್ನಡ 24×7

ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳ ಫಲವತ್ತಾದ ಕೃಷಿ ಜಮೀನುಗಳಲ್ಲಿ ಖಾಸಗಿ ಕಂಪನಿಗಳು ಸೋಲಾರ್ ಹಾಗೂ ವಿಂಡ್ ವಿದ್ಯುತ್ ಯೋಜನೆಗಳನ್ನು ವ್ಯಾಪಕವಾಗಿ ಅಳವಡಿಸುತ್ತಿರುವ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಗಂಭೀರ ವಿಷಯದಲ್ಲಿ ಸ್ಥಳೀಯ ಶಾಸಕ ಬಸವರಾಜ ರಾಯರೆಡ್ಡಿ ಅವರು “ಕುರುಡು ಜಾಣತನದ ಮೌನ” ವಹಿಸಿರುವುದು ಅತ್ಯಂತ ವಿಷಾದನೀಯ ಎಂದು ಸಾಮಾಜಿಕ ಹೋರಾಟಗಾರ ಹಾಗೂ ರೈತ ಎಸ್.ವಿ. ಸೋಮರೆಡ್ಡಿ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲವತ್ತಾದ ಕೃಷಿ ಭೂಮಿಯಲ್ಲಿ ಕಾನೂನುಬಾಹಿರವಾಗಿ ವಿವಿಧ ಖಾಸಗಿ ಕಂಪನಿಗಳ ಯೋಜನೆಗಳು ಸ್ಥಾಪನೆಯಾಗುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದೇ ಮೌನ ವಹಿಸಿದ್ದಾರೆ ಎಂದು ತೀವ್ರ ಟೀಕಿಸಿದರು.

ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ವಿಷಯವನ್ನು ತಂದಿದ್ದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, “ಅನುಮತಿ ನೀಡುವ ಅಧಿಕಾರ ನಮ್ಮದಲ್ಲ” ಎಂದು ಅಧಿಕಾರಿಗಳು ಹೇಳುವುದನ್ನು ಬಿಟ್ಟರೆ, ನಿಯಮ ಉಲ್ಲಂಘಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು.

ಶಾಸಕ ಬಸವರಾಜ ರಾಯರೆಡ್ಡಿ ಅವರು ಇತ್ತೀಚೆಗೆ ಕೃಷಿಭೂಮಿಯನ್ನು ರಕ್ಷಿಸುವ ಬಗ್ಗೆ ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಿದ ಎಸ್.ವಿ. ಸೋಮರೆಡ್ಡಿ, ಅದು ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಬದಲು ಚುನಾವಣಾ ಗಿಮಿಕ್‌ನಂತಿದೆ ಎಂದು ಆರೋಪಿಸಿದರು. ರೈತರ ಬದುಕು ಮತ್ತು ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಗೆ ಇದರಿಂದ ಗಂಭೀರ ಹೊಡೆತ ಬೀಳುತ್ತಿದೆ ಎಂದರು.

ಸರ್ಕಾರವು ರೈತರ ಫಲವತ್ತಾದ ಕೃಷಿಭೂಮಿಯ ಸಂರಕ್ಷಣೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಸೌರ ಹಾಗೂ ಪವನ ವಿದ್ಯುತ್ ಯೋಜನೆಗಳಿಗೆ ಕೃಷಿಗೆ ಅಯೋಗ್ಯ ಅಥವಾ ಪರ್ಯಾಯ ಸರ್ಕಾರಿ ಭೂಮಿಯನ್ನು ಗುರುತಿಸಿ, ಕೃಷಿ ಜಮೀನುಗಳಿಗೆ ಯಾವುದೇ ಧಕ್ಕೆಯಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

Prajavikshane

Chandru R Bhanapaur

Leave a Reply

error: Content is protected !!