BIG NEWS : ಜೈಲ್‌ನಲ್ಲಿ ಪೊರಕೆ ಹಿಡಿದು ಸೆಲ್ ಕ್ಲಿನ್ ಮಾಡಿದ ಆರೋಪಿ ನಟ ದರ್ಶನ..!!
PV NEWS- ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೋಲೆ ಪ್ರಕರಣದಲ್ಲಿ ಎ 2 ಆರೋಪಿಯಾಗಿ ಜೈಲುಪಾಲಾಗಿರುವ ನಟ ದರ್ಶನ್ ಇದೀಗ ಪೊರಕೆ ಹಿಡಿದು ಸೆಲ್ ಕ್ಲಿನ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್, ಇದೀಗ ಜೈಲಿನಲ್ಲಿ ಪೊರಕೆ ಹಿಡಿದು ಸೆಲ್ ಕ್ಲಿನ್ ಮಾಡುತ್ತಿದ್ದಾರೆ.
ಬಳ್ಳಾರಿ ಜೈಲಿಗೆ ಬಂದು 16 ದಿನಗಳ ಕಳೆದಿದ್ದು, ಜೈಲಿನಲ್ಲಿ ದರ್ಶನ್ ಬಟ್ಟೆ ತೊಳೆಯುವುದು, ಶೌಚಾಲಯ ಕ್ಲಿನ್ ಮಾಡುವುದು ಹಾಗೂ ಸೆಲ್ ನ ಕಸ ಗುಡಿಸುವುದು ಸೇರಿ ಎಲ್ಲಾ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಸ್ಟಾರ್ ಆಗಿದ್ ದರ್ಶನ್ ಈಗ ಸಾದಾ ಸೀದಾ ವಿಚಾರಣಾಧೀನ ಕೈದಿಯಂತೆ ಇದ್ದಾರೆ ಎಂದು ಮಾಹಿತಿ ಇದೆ.