SPECIAL STORY : ಸೆ. 10 ರಂದು ಶಿಕ್ಷಕರ ದಿನಾಚರಣೆಗಾಗಿ ಅನಧಿಕೃತ ಶಾಲೆಗಳು ರಜೆ ಘೋಷಣೆ : ಅಧಿಕಾರಿಗಳ ಬೇಕಾಬಿಟ್ಟಿ ನಿರ್ಣಯ..! ಪೋಷಕರ ಆಕ್ರೋಶ..!!

You are currently viewing SPECIAL STORY : ಸೆ. 10 ರಂದು ಶಿಕ್ಷಕರ ದಿನಾಚರಣೆಗಾಗಿ ಅನಧಿಕೃತ ಶಾಲೆಗಳು ರಜೆ ಘೋಷಣೆ : ಅಧಿಕಾರಿಗಳ ಬೇಕಾಬಿಟ್ಟಿ ನಿರ್ಣಯ..! ಪೋಷಕರ ಆಕ್ರೋಶ..!!

ಪ್ರಜಾವೀಕ್ಷಣೆ ವಿಶೆಷ ವರದಿ :-

ಸೆ. 10 ರಂದು ಶಿಕ್ಷಕರ ದಿನಾಚರಣೆಗಾಗಿ ಅನಧಿಕೃತ ರಜೆ ಘೋಷಣೆ : ಅಧಿಕಾರಿಗಳ ಬೇಕಾಬಿಟ್ಟಿ ನಿರ್ಣಯ..! ಪೋಷಕರ ಆಕ್ರೋಶ..!!

PV ನ್ಯೂಸ್‌ ಡೆಸ್ಕ್‌-ಕೊಪ್ಪಳ : ಕಳೆದ ಸೆಪ್ಟೆಂಬರ್‌ 10 ರಂದು ಜಿಲ್ಲೆಯ ಕುಕನೂರು ಹಾಗೂ ಯಲಬುರ್ಗಾ ಉಭಯ ತಾಲೂಕುಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದರು. ಈ ದಿನ ರಜೆ ಘೋಷಣೆ ಮಾಡಲು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರ ಸೂಚನೆ ಮೇರಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಶೈಲಪ್ಪ ಬಿರಾದರ ಅವರು ಈ ಹೇಳಿಕೆ ನೀಡಿ ಆಶ್ಚರ್ಯವನ್ನುಂಟು ಮಾಡಿದ್ದಾರೆ.

ಶ್ರೀಶೈಲಪ್ಪ ಬಿರಾದರ, ಉಪನಿರ್ದೇಶಕ, ಶಿಕ್ಷಣ ಇಲಾಖೆ ಕೊಪ್ಪಳ.

ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಗಳು ಶಾಲೆಗಳಿಗೆ ರಜೆ ಘೋಷಣೆ ಮಾಡಲು ಯಾವುದೇ ಅಧಿಕಾರ ಇಲ್ಲದಿದ್ದರೂ ಸಹ ಜಿಲ್ಲಾಧಿಕಾರಿಗಳನ್ನು ಮೀರಿ ರಜೆ ಘೋಷಣೆ ಮಾಡಿರುವುದು ಜಿಲ್ಲಾಧಿಕಾರಿಗಳ ಗಮನಕ್ಕೂ ಸಹ ಈ ವಿಷಯ ಇರುವುದಿಲ್ಲ. ಇದನ್ನು ಪ್ರಶ್ನೆ ಮಾಡಿದ ಮಾಧ್ಯಮದವರಿಗೆ ಬಸವರಾಜ ರಾಯರೆಡ್ಡಿ ಅವರು ಜಿಲ್ಲೆಯಲ್ಲಿ 10ನೇ ತರಗತಿಯ ಪರೀಕ್ಷಾ ಫಲಿತಾಂಶ ಕುಂಠಿತಗೊಂಡಿದ್ದು, ಈ ಫಲಿತಾಂಶವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರಿಗೆ ಒಂದು ದಿನ ಶೈಕ್ಷಣಿಕ ಕಾರ್ಯಗಾರ ಆಯೋಜಿಸಿ ಎಂದು ಸೂಚನೆ ನೀಡಿದ್ದರು. ಆ ಕಾರ್ಯಗಾರಕ್ಕೆ ಉಭಯ ತಾಲೂಕುಗಳ ಎಲ್ಲಾ ಶಿಕ್ಷಕರು ಹಾಜರಾಗಬೇಕು ಎಂದು ಸೂಚನೆ ನೀಡಿದ್ದರು.

ಆದ್ದರಿಂದ ಯಲಬುರ್ಗಾ ಶಾಸಕರ ಸೂಚನೆಯ ಮೇರೆಗೆ ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ನೀಡಿರುವುದಾಗಿ ಹೇಳಿಕೆ ನೀಡಿರುತ್ತಾರೆ. ಇದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಉಪಾಯವು ಎಂಬ ಅನುಮಾನ ಸಹಜವಾಗಿ ಎಲ್ಲರಲ್ಲಿ ಮೂಡತೊಡಗಿದೆ. “ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬುದು ಕೆಲ ಶಿಕ್ಷಕರ ಅಭಿಪ್ರಾಯವೂವಾಗಿದೆ”.

ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಹೇಳಿಕೆಯ ಪ್ರಕಾರ, ಶಾಸಕರು ರಜೆ ಘೋಷಣೆ ಮಾಡಲು ಸೂಚನೆ ನೀಡಬಹುದಾ?ಎಂಬ ಯಕ್ಷಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ಶಾಸಕರು ಅಥವಾ ಉಪ ನಿರ್ದೇಶಕರು ಉತ್ತರ ನೀಡಬೇಕಾಗಿದೆ. ಅಧಿಕಾರಿಗಳು ಮತ್ತು ಶಿಕ್ಷಕರು ಮೊದಲು ಅರ್ಥಮಾಡಿಕೊಳ್ಳುವ ವಾಸ್ತವ ಅಂಶವೇನೆಂದರೆ, ಮೊದಲು ಶಿಕ್ಷಣ ಆ ಮೇಲೆ ದಿನಾಚರಣೆ, ಕಾರ್ಯಾಗಾರ, ಶಾಲಾ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾದವರೇ ಯಾವೂದೋ ಪ್ರಭಾವಿ ವ್ಯಕ್ತಿಗಳ, ಸಂಘ ಸಂಸ್ಥೆಗಳ ಮಾತನ್ನು ಕೇಳಿ, ಅವಳಿ ತಾಲೂಕಿನ ಮಕ್ಕಳ ಭವಿಷ್ಯದ ಜೊತೆಗೆ ಆಟವಾಡುವುದು ನಿಲ್ಲಸಬೇಕು. ಈ ದಿನಾಚರಣೆ, ಕಾರ್ಯಾಗಾರಗಳನ್ನು ಮಾಡುವುದಕ್ಕೆ ರಜಾ ದಿನಗಳು ಬೇಕಾದಷ್ಟು ಇವೆ. ಇದಕ್ಕಂತಲೇ ವಾರದ ಕೊನೆಯಲ್ಲಿ ಸರ್ಕಾರಿ ರಜಾ ದಿನಗಳು ಇರುತ್ತೇವೆ. ಆ ಸಮಯದಲ್ಲಿ ಮಾಡಿಕೊಳ್ಳಬಹುದಲ್ವಾ? ಎಂದು ಈ ಕುರಿತು ಕೇಲ ಶಿಕ್ಷಣ ತಜ್ಞರು ಭಾರೀ ಬೇಸರ ವ್ಯಕ್ತಪಡೆಸಿದ್ದಾರೆ.

ಸೆ.10 ರಂದು ಅರ್ದ ದಿನ ಶಾಲೆನ್ನು ನಡೆಸಿ ಉಳಿದ ಅರ್ದದಿನದ ರಜೆಯನ್ನು ಇಂದು (ಶನಿವಾರ ) (ಸೆ.14 ರಂದು) ಶಾಲೆಯನ್ನು ನಡೆಸಲಾಗಿದೆ. ಇಂದಿನ ದಿನದ ಅರ್ದ ದಿನ ರಜೆಯನ್ನು ಸರಿದೂಗಿಸಿ ಮಕ್ಕಳಿಗೆ ಹಾಗೂ ಪೋಷಕರಿಗೆ ತೊಂದರೆ ಮಾಡಲಾಗಿದೆ ಎಂದು ಪೋಷಕರ ಆಕ್ರೋಶ ವ್ಯಕ್ತಪಡೆಸಿದ್ದಾರೆ. ಈ ರೀತಿ ತಮಗೆ ಬೇಕಾದಾಗ ರಜೆಯನ್ನು ತಗೆದುಕೊಳ್ಳುವುದು, ಇದ್ಯಾವ ಸರ್ಕಾರಿ ಆದೇಶದಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೆಲ್ಲ ನೋಡಿದಾಗ ಶಿಕ್ಷಣ ಇಲಾಖೆಗೆ ಸರಿಯಾದ ಸುತ್ತೋಲೆ ಇದೆಯೋ ಇಲ್ಲವೋ ಅಥವಾ ಇದ್ದಲ್ಲಿ ಅದು ಉಪನಿರ್ದೇಶಕರ ಗಮನಕ್ಕೆ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡುತ್ತಾ ಜಿಲ್ಲೆಯಲ್ಲಿ ಜಿಲ್ಲಾಡಳಿತ ಎಂಬ ಅಸ್ತ್ರ ಕಾರ್ಯನಿರ್ವಹಿಸುತ್ತಿದೆಯೋ ಇಲ್ಲವೋ ಎಂಬುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

“ಶಿಕ್ಷಣ ಇಲಾಖೆಯ ಕೆಲ ಪ್ರಮುಖರು ನನ್ನ ಬಳಿ ಬಂದು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ತಮ್ಮ ಭಾಗವಹಿಸುವಿಕೆ ಅತಿ ಮುಖ್ಯವಾಗಿದ್ದು ತಾವು ಕ್ಷೇತ್ರದಲ್ಲಿ ಲಭ್ಯವಿರುವ ದಿನಾಂಕವನ್ನು ತಿಳಿಸಿ ಎಂದು ಕೇಳಿದಾಗ ಇಂತಹ ದಿನ ಲಭ್ಯವಿರುತ್ತೇನೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ತಿಳಿಸಿರುತ್ತೇನೆಯೇ ಹೊರತು ಯಾವುದೇ ರೀತಿಯ ರಜೆ ಘೋಷಣೆ ಮಾಡಿ ಎಂದು ಸೂಚನೆ ನೀಡಿರುವುದಿಲ್ಲ ಹಾಗೂ ಶಿಕ್ಷಕರಿಗೆ ಪಾಠ ಮಾಡಲು ನಾನು ಶಿಕ್ಷಣ ತಜ್ಞನು ಅಲ್ಲ”

ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕರು ಯಲಬುರ್ಗಾ.

ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕರು ಯಲಬುರ್ಗಾ.

“ಜಿಲ್ಲೆಯ ಯಲಬುರ್ಗಾ ಹಾಗೂ ಕುಕನೂರು ಉಭಯ ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳಿಗೆ ರಜೆ ನೀಡಿರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಈಗಷ್ಟೇ ತಮ್ಮಿಂದ ವಿಷಯ ತಿಳಿದಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು”

ನಳಿನ್ ಅತುಲ್, ಜಿಲ್ಲಾಧಿಕಾರಿಗಳು ಕೊಪ್ಪಳ

ನಳಿನ್ ಅತುಲ್, ಜಿಲ್ಲಾಧಿಕಾರಿಗಳು ಕೊಪ್ಪಳ

Leave a Reply

error: Content is protected !!