You are currently viewing IPL 2026 Final : 92 ರನ್‌ಗಳಿಂದ ಭರ್ಜರಿ ಗುಜರಾತ್ ವಿರುದ್ಧ ಗೆದ್ದು  ಫೈನಲ್ ಪ್ರವೇಶಿಸಿದ ಆರ್‌ಸಿಬಿ!!

IPL 2026 Final : 92 ರನ್‌ಗಳಿಂದ ಭರ್ಜರಿ ಗುಜರಾತ್ ವಿರುದ್ಧ ಗೆದ್ದು  ಫೈನಲ್ ಪ್ರವೇಶಿಸಿದ ಆರ್‌ಸಿಬಿ!!

IPL 2026 Final : 92 ರನ್‌ಗಳಿಂದ ಭರ್ಜರಿ ಗುಜರಾತ್ ವಿರುದ್ಧ ಗೆದ್ದು  ಫೈನಲ್ ಪ್ರವೇಶಿಸಿದ ಆರ್‌ಸಿಬಿ!!

PV ನ್ಯೂಸ್‌ :

IPL 2026  : ಪಂಜಾಬ್‌ನ ಧರ್ಮಶಾಲಾದಲ್ಲಿ ಮಂಗಳವಾರ (ಮೇ- 26) ನಡೆದ ಐಪಿಎಲ್ 2026ರ ರೋಚಕ ಕ್ವಾಲಿಫೈಯರ್ 1 ಪಂದ್ಯದಲ್ಲಿ  ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)ಯು ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದು, ಇನ್ನು ಗುಜರಾತ್ ಫೈನಲ್‌ಗೆ ಲಗ್ಗೆ ಇಡಲು ಮತ್ತೊಂದು ಅವಕಾಶವಿದೆ. ಈ ಮೂಲಕ ಆರ್‌ಸಿಬಿ ಹೊಸ ದಾಖಲೆ ಬರೆದಿದೆ.

ಟಾಸ್‌ ಸೋತು  ನಾಯಕ  ರಜತ್ ಪಾಟಿದಾರ್  ನೇತೃತ್ವದ ಆರ್‌ಸಿಬಿ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ನಾಯಕ  ಪಾಟಿದಾರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 254 ರನ್‌ಗಳನ್ನು ಪೇರಿಸಿ 255 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತು. ಆದರೆ ಜಿಟಿ 19.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 162 ರನ್‌ ಗಳಿಸಿ ಸೋಲನುಭವಿಸಿತು.

ಆರ್‌ಸಿಬಿ ಹೊಸ ದಾಖಲೆ :-

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 254/5 ರನ್‌ ಗಳಿಸಿ, ಪ್ಲೇ ಆಫ್ ಇತಿಹಾಸದಲ್ಲೇ ಅತ್ಯಧಿಕ ರನ್‌ ಕಲೆಹಾಕಿದ ತಂಡ ಎನಿಸಿಕೊಂಡಿತು. ಕೊನೆವರೆಗೂ ಜವಾಬ್ದಾರಿಯುತ ಆಟವಾಡಿದ ನಾಯಕ ಪಾಟಿದಾರ್ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಅಬ್ಬರಿಸಿದರು. ಇನ್ನು 43 ರನ್ ಗಳಿಸಿದ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಸತತ 4 ಸೀಸನ್‌ಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಕೃನಾಲ್ ಪಾಂಡ್ಯ ಅವರು ಮಧ್ಯಮ ಕ್ರಮಾಂಕದಲ್ಲಿ 43 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು.

Prajavikshane

Chandru R Bhanapaur

Leave a Reply

error: Content is protected !!