ಕುಕನೂರು ಜೂ, 01: ‘ಶರಣು ಕಾರ್ಯಾಲಯದ ಮೂಲಕ ಸಾರ್ವಜನಿಕ ಸೇವೆಗೆ ಸದಾ ಸಿದ್ಧ’ ಎಂದು ಮುಖಂಡ ಕಳಕಪ್ಪ ಕಂಬಳಿ ಹೇಳಿದರು.
ಇಂದು ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಬುರ್ಗಾ ವಿಧಾನಸಭಾ ಕ್ಷೇತ್ರದ 144 ಹಳ್ಳಿಗಳಲ್ಲಿ ಸಭೆ ನಡೆಸಿ ‘ಶರಣು ಕಾರ್ಯಾಲಯ’ದ ಉದ್ಘಾಟನೆ ಹಾಗೂ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ತಾಲೂಕಿನ ಗುರು ಹಿರಿಯರು,ಮುಖಂಡರು ಯುವಕರು ಅಭಿಮಾನಿಗಳು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
“ಪ್ರತಿ ಹಳ್ಳಿಗಳಿಂದ ಜನರು ತಮ್ಮ ಸಮಸ್ಯೆ ಹೇಳಿಕೊಂಡು ನನ್ನ ಬಳಿ ಬಂದಾಗ ಅವರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಕಾರ್ಯಾಲಯವನ್ನು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಪ್ರಾರಂಭಿಸುತ್ತಿದ್ದೇನೆ. ಇದು ಪ್ರತಿಯೊಬ್ಬರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಕಾರ್ಯಾಲಯವಾಗಿದ್ದು, ಯಾವುದೇ ಪಕ್ಷ ಅಥವಾ ಜಾತಿಗೆ ಸೀಮಿತವಾಗಿಲ್ಲ” ಎಂದರು.
ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ನೀರು ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲೂ ಮಹಿಳೆಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈರಪ್ಪ ಕುಡುಗುಂಟೆ ಮಾತನಾಡಿ, ಕಳಕಪ್ಪ ಕಂಬಳಿ ಹಲವಾರು ವರ್ಷಗಳಿಂದ ನೊಂದು ಬಂದವರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡು ಬಂದಿದ್ದಾರೆ ಬಡವರಿಗೆ, ಕಷ್ಟದಲ್ಲಿದ್ದವರಿಗೆ ರೈತರಿಗೆ ಹಲವಾರು ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ ಕಷ್ಟ ಅಂತ ಬಂದ ಜನರಿಗೆ ಸಹಾಯ ಮಾಡುವುದಕ್ಕಾಗಿ ಶರಣು ಕಾರ್ಯಾಲಯ ಉದ್ಘಾಟನೆಯನ್ನು ಜೂನ್ 3 ರಂದು ಮಾಡಲಿದ್ದು ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಉದ್ಘಾಟನೆ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪಕೀರಪ್ಪ ತಳವಾರ್ ಇಮಾಮ್ ಸಾಬ್ ಮಂಡಲಗೇರಿ ರಾಮಣ್ಣ ಕೌದಿ, ಬಾಳಪ್ಪ ಬಾರಕೇರ,ಬುಡ್ಡಪ್ಪ ಬಾರಕೇರ, ಸುರೇಶ್ ಬೆಣಕಲ್, ನೀಲನಗೌಡ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.