ಹೊಕ್ರಾಣಿ :-ಬಹಿರ್ದೆಸೆಗೆ ಹೋದ ಹೊಕ್ರಾಣಿ ಯುವತಿ ಹೆಣವಾಗಿ ಭಾವಿಯ ದಂಡೆ ಮೇಲೆ ಪತ್ತೆ.

ಸಿರವಾರ ವರದಿ

ಹೊಕ್ರಾಣಿ :-ಬಹಿರ್ದೆಸೆಗೆ ಹೋದ ಹೊಕ್ರಾಣಿ ಯುವತಿ ಹೆಣವಾಗಿ ಭಾವಿಯ ದಂಡೆ ಮೇಲೆ ಪತ್ತೆ…

ಹೌದು ತಂತ್ರಜ್ಞಾನದಲ್ಲಿ ದೇಶ ಮುಂದುವರೆದಷ್ಟೇ ವೇಗದಲ್ಲಿ ಮಾನವ ತಲೆತಗ್ಗಿಸುವಂತಹ ಕೃತ್ಯಗಳು ನಡೆಯುತ್ತಿದೆ.ಇದಕ್ಕೆ ಉದಾಹರಣೆ ಎನ್ನುವಂತೆ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ನಿನ್ನೆ ಬುಧವಾರ ಸಂಜೆ ನಡೆದ ಯುವತಿಯ ಬರ್ಬರ ಹತ್ಯೆಯೇ ಜ್ವಲಂತ ನಿದರ್ಶನ.

 

ಘಟನೆ ಏನು ಅಂತ ನೋಡುವುದಾದರೆ?

ಹೊಕ್ರಾಣಿ ಗ್ರಾಮದ ದಲಿತ ಕೋಮಿಗೆ ಸೇರಿದ 18 ಪ್ರಾಯದ ಯುವತಿ ಅಶ್ವಿನಿ ಸಂಜೆ ಬಯಲು ಪ್ರದೇಶದಲ್ಲಿ ಬಹಿರ್ದೆಸೆಗೆ ಹೋಗಿದ್ದಾಳೆ.

ಈ ಸಂದರ್ಭದಲ್ಲಿ ಹೊಂಚು ಹಾಕಿ ಕುಳಿತ ಆಗುಂತಕರು ಯುವತಿಯನ್ನು ಹಿಂಬಾಲಿಸಿ,ಆ ಯುವತಿಗೆ ಮನಸೋ ಇಚ್ಛೆ ಅತ್ಯಾಚಾರವೆಸಗಿ ಕಾಮ ತೃಷೆಯ ತೀಟೆ ತೀರಿಸಿಕೊಂಡಿದ್ದಲ್ಲದೆ,
ಕೊಲೆ ಮಾಡಿ ಶವವನ್ನು ಅದೇ ಗ್ರಾಮದ ಬಾವಿಯ ದಂಡೆಯ ಮೇಲೆ ಬಿಸಾಕಿ ಹೋಗಿರಬಹುದು ಎಂದು ಅಂದಾಜಿಸುತ್ತಿದ್ದಾರೆ.

ತಿಂಗಳ ಹಿಂದಷ್ಟೇ ಆ ಯುವತಿಗೆ ಮದುವೆ ನಿಶ್ಚಯ ಆಗಿತ್ತು ಎಂದು ಹೇಳಲಾಗುತ್ತಿದೆ.ಅದೇ ಗ್ರಾಮದ ರೈತಾಪಿ ವರ್ಗ ಎಂದಿನಂತೆ ಕೃಷಿ ಚಟುವಟಿಕೆಗೆ ಹೊಲ ಗದ್ದೆಗೆ ತೆರಳುವಾಗ ಕೊಲೆ ಮಾಡಿದ ಕೃತ್ಯದ ವಿಷಯ ಬಹಿರಂಗಗೊಂಡಿದೆ.

ಸಾರ್ವಜನಿಕರ ಮಾಹಿತಿ ಪಡೆದ ಪೊಲೀಸರು ಶ್ವಾನ ಹಾಗು ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ, ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದಾರೆ.ಯುವತಿಯ ಮನೆಯಲ್ಲೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

 

Prajavikshane

Chandru R Bhanapaur

Leave a Reply

error: Content is protected !!