ಮುದಗಲ್ಲ :- ಈದ್ ಮಿಲಾದ್ : ಶಾಂತಿ ಕಾಪಾಡಲು ಪೊಲೀಸ್ ಸಭೆ..

ಮುದಗಲ್ಲ ವರದಿ..

ಮುದಗಲ್ಲ :- ಈದ್ ಮಿಲಾದ್ : ಶಾಂತಿ ಕಾಪಾಡಲು ಪೊಲೀಸ್ ಸಭೆ..

ಮುದಗಲ್ಲ: ಈದ್ ಮಿಲಾದ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸುವ್ಯವಸ್ಥೆ
ಕಾಪಾಡುವ ಕುರಿತು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ
ಈದ್ ಮಿಲಾದ್ ಮೆರವಣಿಗೆ ಮತ್ತು ಕಾರ್ಯಕ್ರಮವನ್ನು
ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ನಡೆಸುವ
ಬಗ್ಗೆ ಚರ್ಚಿಸಲಾಯಿತು.

ಮೆರವಣಿಗೆ ಮಾರ್ಗ, ಸಂಚಾರ
ವ್ಯವಸ್ಥೆ, ಭದ್ರತಾ ಕ್ರಮಗಳು ಹಾಗೂ ಯಾವುದೇ ಅಹಿತಕರ
ಘಟನೆಗಳು ನಡೆಯದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ
ಕ್ರಮಗಳ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಿತು.

ಪೋಲಿಸ್ ಠಾಣೆಯ ಪಿಎಸ್ಐ ವೆಂಕಟೇಶ್ ಮಾಡಗೇರಿ ಅವರು
ಮಾತನಾಡಿ, ಕಾರ್ಯಕ್ರಮದ ವೇಳೆ ಸಾರ್ವಜನಿಕರು
ಪೊಲೀಸರೊಂದಿಗೆ ಸಹಕರಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟಾಗದಂತೆ
ಎಚ್ಚರ ವಹಿಸಬೇಕು. ಈದ್ ಮಿಲಾದ್ ಹಬ್ಬವನ್ನು ಶಾಂತಿ,
ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶದೊಂದಿಗೆ
ಆಚರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಮಸೀದಿ
ಸಮಿತಿಗಳ ಪ್ರಮುಖರು ಈದ್ ಮಿಲಾದ್ ಅಂಗವಾಗಿ ವೇದಿಕೆ
ಕಾರ್ಯಕ್ರಮ ಹಾಗೂ ಮೀಲಾದ್ ಸಂದೇಶ ಜಾಥ
ಆಯೋಜಿಸುವ ಬಗ್ಗೆ ಮಾಹಿತಿ ನೀಡಿದರು.

ಮೌಲಾನಾ ಜಮೀರ್ ಅಹ್ಮದ್ ಖಾಜಿ, ಗುರುಬಸಪ್ಪ ಸಜ್ಜನ್,ಮಹ್ಮದ್ ರಫಿ ಖಾಜಿ ಮಾತನಾಡಿದ್ದರು

ಪುರಸಭೆಯವರು ಸಭೆಯಲ್ಲಿ ಗೈರು ಹಾಗಿದ್ದು  ನೋಡಿ ಮುಸ್ಲಿಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಸೈಯದ್ ಯಾಸೀನ್ ಖಾದ್ರಿ, ಅಮೀರ್ ಬೇಗ್ ಉಸ್ತಾದ್, ನಂದಪ್ಪ ಕತ್ತಿ, ಮಾಸುಮ್ ಷರೀಫ್, ಸಣ್ಣ ಸಿದ್ಧಯ್ಯ, ಬಸವರಾಜ ಬಂಕದಮನಿ, ಮೆಹಬೂಬ್ ಸಾಬ್ ಹಳೆಪೇಟೆ, ಜಮೀರ್ ಪಾಷಾ, ಮೌಲಾನಾ ಮೆಹಬೂಬ್ ಅಲಿ, ಗಯಾಜ್, ಸಂಗಪ್ಪ ಹಿರೇಮನಿ, ಪಾಷಾ ಕಡ್ಡಿಪುಡಿ, ಮೀರು ಷಾ, ಭೀಮಣ್ಣ ಉಪ್ಪಾರ, ಸಲೀಂ ಸಿರಾಮಿಕ್ ಸೇರಿದಂತೆ ಮುಂತಾದವರು ಇದ್ದರು.

ವರದಿ :-ಮಂಜುನಾಥ ಕುಂಬಾರ

 

Prajavikshane

Chandru R Bhanapaur

Leave a Reply

error: Content is protected !!