ಮುದಗಲ್ಲ ವರದಿ
ರೋಹಿಣಿ ವಿವಿಧೋದ್ದೇಶ ಸಹಕಾರಿ ನಿಯಮಿತ 19ನೇ ವಾರ್ಷಿಕ ಸಭೆ ನಡೆಯಿತು..

ಮುದಗಲ್ಲ :- ಕಿಲ್ಲಾದ ರಾಮಲಿಂಗೇಶ್ವರ ದೇವಸ್ಥಾನ ದಲ್ಲಿ ರೋಹಿಣಿ ವಿವಿದೋದ್ದೇಶ ಸಹಕಾರಿ ಸಂಘ ನಿಯಮಿತ 19ನೇ ವಾರ್ಷಿಕ ಮಹಾಸಭೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು.

ರೋಹಿಣಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 19ನೇ ವಾರ್ಷಿಕ ಸಭೆ ಉದಯ ಕಂಬಾರ ಅಧ್ಯಕ್ಷತೆಯಲ್ಲಿ ನಡೆಯಿತು ಸಂಘದ ಹಿರಿಯರಾದ ಯೋಗಿಶಪ್ಪ ಮಾತನಾಡಿದರು ನಂತರ ಅಧ್ಯಕ್ಷರಾದ ಉದಯ ಕಂಬಾರ ಅವರು ಮಾತನಾಡಿದರು ಸಂಘದ 16ನೇ ವಾರ್ಷಿಕ ಸಾಮಾನ್ಯ ಸಭೆಗೆ ಸರ್ವಸದಸ್ಯರೆಲ್ಲರಿಗೂ ಹೃತೂರ್ವಕವಾಗಿ ಸ್ವಾಗತಿಸುತ್ತಾ
ತುಂಬಾ ಸಂತೋಷವೆನಿಸುತ್ತುದೆ.
ಸಹಕಾರಿಯು ಕಳೆದ ವರ್ಷದಲ್ಲಿ ಠೇವು ಸಂಗ್ರಹಣೆ, ಸಾಲ ನೀಡಿಕೆ, ಮತ್ತು ಸಾಲ ವಸೂಲಾತಿ, ಲಾಭ ಗಳಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುತ್ತದೆ. ಹಾಗೂ ಸಹಕಾರಿ ಸದಸ್ಯರು
ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರೆ
ಇದಕ್ಕೆ ಕಾರಣರಾದ ರೋಹಿಣಿ ವಿವಿದೋದ್ದೇಶ ಸಹಕಾರಿ ಸಂಘ ನಿಯಮಿತ ಸಹಕಾರಿಯ ಸರ್ವಸದಸ್ಯರಿಗೂ ಧನ್ಯವಾದಗಳು.
ಕಳೆದ ವರ್ಷದಂತೆ ಈ ವರ್ಷವೂ ಕೂಡ ಸಹಕಾರಿಯ ಲೆಕ್ಕಪರಿಶೋಧನೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಲೆಕ್ಕಪರಿಶೋಧಕರಾದ ಶ್ರೀ ಮತಿ ಪ್ರಿಯಾಂಕಾ ಸಾನಾಬಾಳ ಸಹಕಾರ ಸಂಘಗಳ ಲೆಕ್ಕ ಪರಿಶೋಧಕರು ಇವರಿಗೆ ನಮ್ಮ ಹತ್ತೂರ್ವಕ ಅಭಿನಂದನೆಗಳು ಸಲ್ಲಿಸಿದರು.
ಮುಖ್ಯ ಕಾಯ೯ ನಿವಾ೯ಹಕರಾದ ಅಜೀತ್ ಗಂಟ್ಯಾಳ ಅವರು
ಸ್ವಾಗತಿಸಿ ವರದಿ ಮತ್ತು ಲೆಕ್ಕಪತ್ರ ವಾಚಿಸಿ, ಸಂಘದ 2024-25 ನೇ ಆರ್ಥಿಕ ಸಾಲಿನ ಅಂತ್ಯಕ್ಕೆ ಸಂಘದಲ್ಲಿ 592 ಸದಸ್ಯರಿದ್ದು, 2,70,83,498 ಕೋಟಿ ಸಾಲವನ್ನು ವಿತರಿಸಿದೆ. 87,93,680 ಲಕ್ಷಗಳಷ್ಟು ಕ್ಷೇಮ ನಿಧಿ, ಸಂಘದ ಷೇರು 10,26,000ಇರುತ್ತದೆ ಸಂಘವು ಸ್ಥಾಪನೆಗೊಂಡ ವರ್ಷದಿಂದ ತನ್ನ ಸದಸ್ಯರಿಗೆ ಡಿವಿಡೆಂಡ್ ನೀಡಿಕೊಂಡು ಬರುತ್ತಿರುವ ಮತ್ತು ಆಡಿಟ್ ವರ್ಗದಲ್ಲಿ ಸತತವಾಗಿ “ಎ” ತರಗತಿಯನ್ನು ಕಾಯ್ದುಕೊಂಡು ಬಂದಿರುವ ಏಕೈಕ ಸಂಘ ವಾಗಿರುತ್ತದೆ ಸಂಘದ ಪ್ರಗತಿ ಮತ್ತು ಸೇವೆಯನ್ನು ಪರಿಗಣಿಸಿ 2024-25 ನೇ ಸಾಲಿನಲ್ಲಿ ಸಂಘವು ತನ್ನ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದ
ಸಂಘದ ಅಥಿ೯ಕ ವ್ಯವಹಾರ ದ ಮಾಹಿತಿ ಹೇಳಿದರು..
ಕಾಯಾ೯ಕ್ರಮದ ನಿರೂಪಣೆ ಯನ್ನು ಅಪ್ಪು ವಿಧ್ಯಾದಾಮದ ಮುಖ್ಯಾ ಗುರುಗಾಳಾದ ಮಹಾಂತೇಶ ಚಲುವಾದಿ ಅವರು ಮಾಡಿದರು.
ಈ ಸಂದರ್ಭದಲ್ಲಿ ರೋಹಿಣಿ ವಿವಿಧೋದ್ದೇಶ ಸಹಕಾರಿದ ಅಧ್ಯಕ್ಷ ರಾದ ಉದಯಕುಮಾರ್ ಕಂಬಾರ ,ಉಪಾಧ್ಯಕ್ಷ ರಾದ ಮಂಜುನಾಥ ಕುಂಬಾರ , ಮುಖ್ಯ ಕಾಯ೯ನಿವಾ೯ಹಕರಾದ ಅಜೀತ್ ಗಂಟ್ಯಾಳ ಅವರು ಸಂಘದ ಹಿರಿಯರಾದ ಯೋಗೇಶಪ್ಪ ಹಾಗೂ ಶಿವಕುಮಾರ್ ಕುಂಬಾರ,ಸಿಮಾ ಬುಜುರಿಕರ್ , ಶರಣಪ್ಪ ಜಾದವ್ , ಮಲ್ಲಿಕಾರ್ಜುನ ,ನಾಗರಾಜ್ ದಪ್ಪೇದಾರ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..
ವರದಿ:–ಮಂಜುನಾಥ ಕುಂಬಾರ