ಮುದಗಲ್ಲ ವರದಿ..
ಸ್ವಚ್ಛತಾ ಹೀ ಸೇವಾ : ಪುರಸಭೆ ವತಿಯಿಂದ “ಸ್ವಚ್ಛೋತ್ಸವ” ಕಾರ್ಯಕ್ರಮ..!..

ಮುದಗಲ್ಲ :- ಸ್ವಚ್ಛ ಭಾರತ್ ಮಿಷನ್ ಯೋಜನೆಯ “ಸ್ವಚ್ಛೋತ್ಸವ” ಎಂಬ ಶೀರ್ಷಿಕೆಯಡಿ “ಸ್ವಚ್ಛತಾ ಹೀ ಸೇವಾ” ಕಾರ್ಯಕ್ರಮದ ಅಂಗವಾಗಿಮುದಗಲ್ಲ ಪುರಸಭೆ ವತಿಯಿಂದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಯ೯ಕ್ರಮ ನಡೆಯಿತು
ಈ ಸಂದರ್ಭದಲ್ಲಿ ಪುರಸಭೆ ಯ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿ ,ಸಾವ೯ಜನಿಕ ಸ್ಥಳದಲ್ಲಿ ಕಸ, ಪ್ಲಾಸ್ಟಿಕ್, ಪರಿಸರ ಹಾನಿಕಾರಕ ತ್ಯಾಜ್ಯಗಳನ್ನು ಸುರಿಯಬಾರದು ಎಂದು ಸಾರ್ವಜನಿಕ ಪ್ರಕಟಣೆ ನಾಮಫಲಕವನ್ನು ಅಳವಡಿಸಿ, ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಆರೋಗ್ಯಕರವಾಗಿ, ಸ್ವಚ್ಛತೆಯನ್ನು ಹಾಗೂ ಆರೋಗ್ಯ ವನ್ನು ಕಾಪಾಡಿಕೊಳ್ಳುವುದರ ವಿಚಾರವಾಗಿ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ರಾದ ಅಜ್ಮೀರ್ ಸಾಬ ಬೆಳ್ಳಿಕಟ್ , ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಯಾದ ತಮ್ಮಣ್ಣ ಗುತ್ತೇದಾರ್,ಪುರಸಭೆ ಸದಸ್ಯರಾದ ಹನುಮಂತ ವಾಲ್ಮೀಕಿ, ಮೈಬುಸಾಬ ಕಡ್ಡಿಪುಡಿ, ಹಾಗೂ ನೈಮಲ್ಯ ಅಧಿಕಾರಿ ರೈಮತ್ ಹುನ್ನಿಸಾ ಬೇಗಂ,
ಮ್ಯಾನೇಜರ್ ಸುರೇಶ್ ,ಬಸವರಾಜ ಮೇಟಿ ಸಿಬ್ಬಂದಿಗಳಾದ ಚನ್ನಮ್ಮ ಹಿರೇಮಠ , ಪೌರ ಕಾರ್ಮಿಕ ರಾದ ಅಧ್ಯಕ್ಷ ರಾದ , ಬಸವರಾಜ ಕಟ್ಟಿಮನಿ, ಗೌರವ ಅಧ್ಯಕ್ಷ ರಾದ ರಾಮಣ್ಣ ,ಹಾಗೂ ಹುಲಗಪ್ಪ ಸಂಜೀವಪ್ಪ , ರವಿ , ಅಮರೇಶ , ನಾಗರಾಜ,ವಿನೋದ,ಸಂಜೀವಪ್ಪ,ರಮೇಶ ಹಟ್ಟಿ ,ಆದಿಬಸವ, ಸರಸ್ವತಿ ,ರತ್ನಮ್ಮ,ಮಲ್ಲಮ್ಮ,
ಬಸಮ್ಮ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ