PV NEWS : ಟೀ ಜೊತೆಗೆ ಕನ್ನಡದ ಕಂಪು; ಕುಕನೂರಿನಲ್ಲಿ ‘ಕರುನಾಡ ಕೆಫೆ’ ಶುಭಾರಂಭ!
PV NEWS ಕನ್ನಡ 24×7:
ಕುಕನೂರು, ಆ.25 : ಪಟ್ಟಣದ ಗವಿಸಿದ್ದೇಶ್ವರ ಪ್ರೌಢಶಾಲೆ ಸಮೀಪ ನೂತನವಾಗಿ ‘ಕರುನಾಡ ಕೆಫೆ’ ಆರಂಭಗೊಂಡಿದ್ದು, ಸ್ಥಳೀಯ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಸೊಗಡಿನೊಂದಿಗೆ ವಿಭಿನ್ನವಾಗಿ ರೂಪುಗೊಂಡಿರುವ ಈ ಟೀ ಶಾಪ್ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ನೀಲಗುಂದ ಮಠದ ಶ್ರೀ ಪ್ರಭುಲಿಂಗ ದೇವರ ಅಮೃತ ಹಸ್ತದಿಂದ ‘ಕರುನಾಡ ಕೆಫೆ’ಯ ಉದ್ಘಾಟನೆ ನೆರವೇರಿತು. ಅನ್ನದಾನೇಶ್ವರ ಮಠ, ಕುಕನೂರಿನ ಮಹಾದೇವ ಮಹಾಸ್ವಾಮಿಗಳು ಹಾಗೂ ಶಿವಯೋಗಿ ಶಿವರುದ್ರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಗುದ್ನೇಪ್ಪನ ಮಠದ ಬಸವರಾಜ ಯಳವತ್ತಿ ಹಾಗೂ ಯಳವತ್ತಿ ಕುಟುಂಬದವರು ‘ಕರುನಾಡ ಕೆಫೆ’ಯನ್ನು ಆರಂಭಿಸಿದ್ದಾರೆ. ಸಾಮಾನ್ಯ ಟೀ ಶಾಪ್‌ಗಳಿಗಿಂತ ವಿಭಿನ್ನವಾಗಿ ಸ್ಥಳೀಯ ಸಂಸ್ಕೃತಿ, ಆತಿಥ್ಯ ಹಾಗೂ ರುಚಿಯನ್ನು ಒಂದೆಡೆ ಪರಿಚಯಿಸುವ ಉದ್ದೇಶದಿಂದ ಕೆಫೆಯನ್ನು ವಿನ್ಯಾಸಗೊಳಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಗ್ರಾಮದ ಗುರುಹಿರಿಯರು, ಬಂಧು-ಮಿತ್ರರು ಹಾಗೂ ಸಾರ್ವಜನಿಕರು ಪಾಲ್ಗೊಂಡು ನೂತನ ಉದ್ಯಮಕ್ಕೆ ಶುಭ ಹಾರೈಸಿದರು. ಸ್ಥಳೀಯ ಸಂಸ್ಕೃತಿಯ ಸೊಗಡನ್ನು ಉಳಿಸಿಕೊಂಡು ಯುವಕರಿಗೆ ಹಾಗೂ ಸಾರ್ವಜನಿಕರಿಗೆ ವಿಶಿಷ್ಟ ಅನುಭವ ನೀಡುವ ಪ್ರಯತ್ನ ಇದಾಗಿದೆ ಎಂದು ಕುಟುಂಬದವರು ತಿಳಿಸಿದರು.