LOCAL NEWS : ಮುಂಡರಗಿ ಅನ್ನದಾನೀಶ್ವರ ಮಹಾಶಿವಯೋಗಿಗಳ ಪಲ್ಲಕ್ಕಿ ಉತ್ಸವ!

You are currently viewing LOCAL NEWS : ಮುಂಡರಗಿ ಅನ್ನದಾನೀಶ್ವರ ಮಹಾಶಿವಯೋಗಿಗಳ ಪಲ್ಲಕ್ಕಿ ಉತ್ಸವ!

ಮುಂಡರಗಿ ಅನ್ನದಾನೀಶ್ವರ ಮಹಾಶಿವಯೋಗಿಗಳ ಪಲ್ಲಕ್ಕಿ ಉತ್ಸವ

ಮುಂಡರಗಿ : ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳು ಜರುಗಿದ ‘ಮಹಾತ್ಮರ ಜೀವನ ದರ್ಶನ’ ಪ್ರವಚನದ ಮಂಗಲೋತ್ಸವದ ನಿಮಿತ್ತ ಸೋಮವಾರ ಶ್ರೀಮಠದ ಮೂಲಕರ್ತೃ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳವರ ಭಾವಚಿತ್ರದ ಪಲ್ಲಕ್ಕಿ ಉತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.

ಉತ್ಸವಕ್ಕೆ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಚಾಲನೆ ನೀಡಿ, ಒಂದು ತಿಂಗಳಿಂದ ನಡೆದು ಬಂದಿರುವ ಮಹಾತ್ಮರ ಜೀವನ ದರ್ಶನ ಪ್ರವಚನದಲ್ಲಿ ಬಸವಣ್ಣನವರು, ಅಲ್ಲಮ ಪ್ರಭುದೇವರು, ಹಡಪದ ಅಪ್ಪಣ್ಣ, ಸಿದ್ಧರಾಮೇಶ್ವರರು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮತ್ತು ಶ್ರೀಮಠದ ಮೂಲಕರ್ತೃ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳವರ, ಸೊರಟೂರ ಪೂಜ್ಯರು, ಬಳ್ಳೋಳ್ಳಿ ಶ್ರೀಗಳು, ವೆಂಕಟಾಪುರ ಪೂಜ್ಯರ ಜೀವನ ದರ್ಶನವನ್ನು ಪ್ರವಚನದಲ್ಲಿ ವಿವರಿಸಲಾಗಿದೆ ಎಂದರು.

ಪ್ರವಚನಕಾರ ಶ್ರೀ ನಾಗಭೂಷಣ ಸ್ವಾಮೀಜಿ, ಪ್ರವಚನ ಸಮಿತಿ ಅಧ್ಯಕ್ಷ ಮಂಜುನಾಥ ಮುಧೋಳ, ಉಪಾಧ್ಯಕ್ಷ ವಿಶ್ವನಾಥ ಗಡ್ಡದ, ಕಾರ್ಯದರ್ಶಿ ನಾಗರಾಜ ಮುಖ್ಯೆ, ಸಹಕಾರ್ಯದರ್ಶಿ ಮುತ್ತು ಬಳ್ಳಾರಿ, ಖಜಾಂಚಿ ಮಂಜುನಾಥ ಶಿವಶೆಟ್ಟರ, ಡಾ. ಬಿ.ಜಿ. ಜವಳಿ, ಕರಬಸಪ್ಪ ಹಂಚಿನಾಳ, ಎಂ.ಎಸ್‌. ಶಿವಶೆಟ್ಟಿ, ಗುಡದೀರಪ್ಪ ಲಿಂಬಿಕಾಯಿ, ಕುಮಾರ ಬನ್ನಿಕೊಪ್ಪ,ಮಹಾಲಿಂಗಯ್ಯ ಹಿರೇಮಠ, ಎಸ್.ಸಿ. ಚಕ್ಕಡಿಮಠ,ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು,

 ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!