BREAKING : ಕೊಪ್ಪಳದಲ್ಲಿ ಘೋರವಾದ ದುರಂತ..!! : ಅದೇನಂತೀರಾ? ಇಲ್ಲಿದೆ ಮಾಹಿತಿ…

You are currently viewing BREAKING : ಕೊಪ್ಪಳದಲ್ಲಿ ಘೋರವಾದ ದುರಂತ..!! : ಅದೇನಂತೀರಾ? ಇಲ್ಲಿದೆ ಮಾಹಿತಿ…

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ :

BREAKING : ಕೊಪ್ಪಳದಲ್ಲಿ ಘೋರವಾದ ದುರಂತ..!! : ಇಬ್ಬರು ಬಾಲಕರು ನೀರಪಾಲು..!

ಕೊಪ್ಪಳ : ಜಿಲ್ಲೆಯಲ್ಲಿ ಘೋರವಾದ ದುರಂತ ಸಂಭವಿಸಿದ್ದು, ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ವಿಷಯ ಬೆಳಕಿಗೆ ಬಂದಿದೆ. ಈ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಗ್ರಾಮದಲ್ಲಿ ನಡೆದಿದೆ.

ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನಿರುಪಾಲಾಗಿದ್ದು, ಮೃತ ಬಾಲಕರನ್ನು, ಗಂಗಾವತಿ ನಿವಾಸಿಗಳಾದ ಪವನ್ (14) ಹಾಗೂ ಗೌತಮ್ (15) ನೀರು ಪಾಲಾಗಿರುವ ಬಾಲಕರು ಎಂದು ತಿಳಿದು ಬಂದಿದೆ. ಮೃತ ಪವನ್ ಕುಮಾರ್ ಮೃತದೇಹ ಪತ್ತೆಯಾಗಿದ್ದು, ಅವನ ಸ್ನೇಹಿತ ಗೌತಮ್ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಘಟನೆ ಕುರಿತಂತೆ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!