ಕೊಪ್ಪಳ ಫೆ.14 : ನಾಡಿನ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ (ಅತ್ಯುನ್ನತ ಸೇವೆ) ಸಲ್ಲಿಸುತ್ತಿರುವ ಸಾಧಕರಿಗೆ ಜಾನಪದ ಕಲಾವಿದರ ಒಕ್ಕೂಟ (ರಿ), ಮೈಸೂರು ವಿಭಾಗ ಇವರು ಕೊಡಮಾಡಲ್ಪಡುವ 2025-26ನೇ ಸಾಲಿನ ರಾಜ್ಯ ಮಟ್ಟದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಬರಹಗಾರ, ಸಾಹಿತಿ ಸೋಮನಾಥ ಅವರು ಆಯ್ಕೆಯಾಗಿದ್ದಾರೆ.
ಸುಮಾರು 20 ವರ್ಷಗಳಿಂದ ಯಾವುದೇ ಪ್ರಚಾರ ಬಯಸದೇ ಸಾಹಿತ್ಯಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ದೋಟಿಹಾಳ ಸೋಮನಾಥ ಅವರು ಒಂದು ಕವಿತಾ ಸಂಕಲನ, ಸಂಪದನಾ ಕೃತಿ ಸೇರಿ, ಹಲವಾರು ಮೌಲಿಕ ಬರೆಹಗಳು ನಾಡಿನ ದಿನಪತ್ರಿಗಳಲ್ಲಿ ಪ್ರಕಟಿತಗೊಂಡಿವೆ. ಹಾಗೂ ಹೋಬಳಿ, ಜಿಲ್ಲೆ, ವಿಭಾಗ, ರಾಜ್ಯ ಮಟ್ಟದ ಕವಿಗೋಷ್ಠಿ, ಸಾಹಿತ್ಯಕ ಸಮೇಳನ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕನ್ನಡ ಸಾಹಿತ್ಯಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಸೋಮನಾಥರನ್ನು ಜಾನಪದ ಕಲಾವಿದರ ಒಕ್ಕೂಟ (ರಿ), ಮೈಸೂರು ಸಂಸ್ಥೆಯು ಸಾಹಿತ್ಯ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು,ಮೈಸೂರ ನಗರದ ಕೃಷ್ಣಮೂರ್ತಿಪುರಂ ನಲ್ಲಿರುವ ನಮನ ಕಲಾ ಮಂಟಪದಲ್ಲಿ ಫೆಬ್ರವರಿ 21ನೇ ಶನಿವಾರದಂದು ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಆರ್.ಕೆ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತಿ ದೋಟಿಹಾಳ ಸೋಮನಾಥ ಅವರು ಪ್ರಶಸ್ತಿಗೆ ಆಯ್ಕೆ ಆಗಿದ್ದಕ್ಕೆ ಗ್ರಾಮಸ್ಥರು ಸ್ನೇಹ ಬಳಗ, ಸಹದ್ಯೋಗಿಗಳು ಸಂತಸ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.