LOCAL NEWS : ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು : ರೀಯಾಜ್ ತಹಶೀಲ್ದಾರ!

You are currently viewing LOCAL NEWS : ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು : ರೀಯಾಜ್ ತಹಶೀಲ್ದಾರ!

LOCAL NEWS : ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು : ರೀಯಾಜ್ ತಹಶೀಲ್ದಾರ!

ಶಿರಹಟ್ಟಿ : ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕರ ಮೇಲೆ ದಾಳಿ ನಡೆಸಿದ ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮುಸ್ಲಿಂ ಯುನಿಟಿ ಶಿರಹಟ್ಟಿ ಘಟಕದ ಅಧ್ಯಕ್ಷ ರೀಯಾಜ್ ತಹಶೀಲ್ದಾರ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿಗಾದ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮಾನವೀಯತೆಯೇ ಮೊದಲ ಧರ್ಮ” ಭಯೋತ್ಪಾದಕರಿಗೆ ಜಾತಿ ಧರ್ಮ ಯಾವುದು ಇರುವುದಿಲ್ಲ ಇವರಿಗೆ ಭಯೋತ್ಪಾದನೆಯೇ ಜಾತಿ ಮತ್ತು ಧರ್ಮ ಆಗಿರುತ್ತದೆ. ಜಮ್ಮು- ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿರುವ ದಾಳಿ ಹೇಯ ಮತ್ತು ಹೇಡಿತನದ ಕೃತ್ಯವಾಗಿದೆ ಹಾಗೂ ಈ ಘಟನೆಯನ್ನು ಶಿರಹಟ್ಟಿಯ ಕರ್ನಾಟಕ ಮುಸ್ಲಿಂ ಯುನಿಟಿಯು ತ್ರೀವ್ರವಾಗಿ ಖಂಡಿಸುತ್ತದೆ.

ಅಮಾಯಕರ ಮೇಲೆ ದಾಳಿ ನಡೆಸಿದವರು ಯಾವದೇ ಧರ್ಮಕ್ಕೆ ಸೇರಿದವರಾಗಿದ್ದರೂ ಅವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ನಮ್ಮ ಭಾರತವು ಹಲವು ಸಂಸ್ಕ್ರತಿಗಳನ್ನು ಒಳಗೊಂಡ ಒಂದು ಮಾದರಿ ದೇಶ ಶಾಂತಿಯೇ ನಮ್ಮ ಮೊದಲ ಮಂತ್ರವಾಗಿದೆ. ಸದರಿ ಈ ಘಟನೆಯನ್ನು ಪ್ರತಿಯೊಬ್ಬ ಭಾರತೀಯನು ಉಗ್ರವಾಗಿ ಖಂಡಿಸಬೇಕು. ಶಾಂತಿ ಪ್ರಿಯ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಇಂತಹ ಹೇಯ ಕೃತ್ಯಗಳ ವಿರುದ್ಧ ಕೇಂದ್ರ ಸರಕಾರ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು.

ಈ ಘಟನೆಯಲ್ಲಿ ಭಾಗಿಯಾದ ಭಯೋತ್ಪದಕರನ್ನು ಆದಷ್ಟು ಬೇಗ ಪತ್ತೆಹಚ್ಚಿ ಅತ್ಯಂತ ಕಠಿಣವಾದ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಈ ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಸೂಕ್ತವಾದ ಪರಿಹಾರ ನೀಡಬೇಕೆಂದು ಕರ್ನಾಟಕದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕರ್ನಾಟಕ ಮುಸ್ಲಿಂ ಯುನಿಟಿಯ ಒಕ್ಕೂರಲಿನ ಆಗ್ರಹವಾಗಿದೆ.

ಈ ಸಂದರ್ಭದಲ್ಲಿ ಶಿರಹಟ್ಟಿ ಕರ್ನಾಟಕ ಮುಸ್ಲಿಂ ಯುನಿಟಿ ಪದಾಧಿಕಾರಿಗಳದ ರೀಯಾಜ್ ಲಕ್ಷ್ಮೇಶ್ವರ,ಇಬ್ರಾಹಿಂ ಮನಿಯಾರ,ಹಾಜಿ ಖುರೇಶ್ ಮನಿಯಾರ,ಹಾಜಿ ಸಾದಿಕ್ ಮುಳಗುಂದ,ಮೌಲಾ ಕಾರಬೂದಿ,ಸುಭಾನಿ ಬರದೂರ ಮುಂತಾದವರು ಉಪಸ್ಥಿತರಿದ್ದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!