ಮುದಗಲ್ಲ ವರದಿ..
ಮುದಗಲ್ಲ ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಆಚರಣೆ..

ಮುದಗಲ್ಲ :- ಪ್ರೀತಿ, ವಾತ್ಸಲ್ಯ, ವಿಶ್ವಾಸ ಹಾಗೂ ಸಹೋದರತ್ವದ ಸಂಕೇತವಾದ ರಕ್ಷಾ ಬಂಧನದ ಪವಿತ್ರ ಹಬ್ಬವನ್ನು ಮುದಗಲ್ಲ ಮಹಿಳಾ ಮೋರ್ಚಾ ಪದಾಧಿಕಾರಿ ಗಳು ಆತ್ಮೀಯವಾಗಿ ಆಚರಿಸಿದರು.
ರಕ್ಷಾ ಬಂಧನದ ಅಂಗವಾಗಿ ಮುದಗಲ್ಲ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿ ಸಹೋದರಿಯರು ವಿವಿಧ ಸರಕಾರಿ ಕಛೇರಿಗಳಿಗೆ ಬೇಟಿ ನೀಡಿ ಅಲ್ಲಿನ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ಗಳಿಗೆ ರಾಖಿ ಕಟ್ಟಿ, ಸಿಹಿ ತಿನಿಸಿ, ಪ್ರೀತಿ-ವಾತ್ಸಲ್ಯ ದಿಂದ ಶುಭ ಹಾರೈಸಿದರು.

ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಬೋಗರಾ ಹಾಗೂ ಪುರಸಭೆ ಸಿಬ್ಬಂದಿ ಪ್ರಶಾಂತ್ ಹಾಗೂ ಬಾಬ ಹಾಗೂ ನಿಸಾರ್ ಅಹಮದ್ ಹಾಗೂ ಪತ್ರಕರ್ತ ರಾದ ಮಂಜುನಾಥ ಕುಂಬಾರ ಅವರಿಗೆ ರಾಖಿ ಕಟ್ಟುವ ಮೂಲಕ ಸಹೋದರತ್ವದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಬೋಗರಾ ಅವರು ಮಾತನಾಡಿ “ನಮ್ಮ ಕರ್ತವ್ಯ ವನ್ನು ಗುರುತಿಸಿ ಹಬ್ಬದ ಸಂದರ್ಭ ನಮ್ಮನ್ನು ನೆನಪಿಸಿ ಕೊಂಡಿದ್ದಕ್ಕೆ ಸಂತೋಷ. ಇದು ನಮ್ಮಲ್ಲಿ ಮತ್ತಷ್ಟು ಹೊಣೆಗಾರಿಕೆ, ಪ್ರೇರಣೆ ಮೂಡಿಸುತ್ತದೆ,” ಎಂದು ಹೇಳಿದರು.

ಸಿಬ್ಬಂದಿಗಳು ಸಹ ತಮ್ಮ ಅಭಿಪ್ರಾಯ ಹಂಚಿಕೊಂಡು, ಇಂತಹ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ನಂಬಿಕೆ, ಸಹಕಾರ ಮತ್ತು ಬಾಂಧವ್ಯವನ್ನು ಹೆಚ್ಚಿಸಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ರಕ್ಷಾ ಬಂಧನ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾದರೂ, ಈ ಬಾರಿ ಮಹಿಳಾ ಮೋರ್ಚಾ ಅದನ್ನು ಹೊಸ ಅರ್ಥ ನೀಡುವಂತೆ ಆಚರಿಸಿದೆ. ಪೊಲೀಸರನ್ನೂ ಸಮಾಜದ “ರಕ್ಷಕರು” ಎಂದು ಪರಿಗಣಿಸಿ, ಅವರಿಗೆ ರಾಖಿ ಕಟ್ಟುವ ಮೂಲಕ ಈ ಹಬ್ಬವನ್ನು ಜನಸಾಮಾನ್ಯರ ಮತ್ತು ಕಾನೂನು ರಕ್ಷಕರ ನಡುವಿನ ಬಾಂಧವ್ಯದ ಹಬ್ಬವನ್ನಾಗಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಲಿಂಗಸೂರ ತಾಲೂಕಿನ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸತ್ಯಾ ಚಿಂತಾಪತಿ,ಪ್ರಧಾನ ಕಾರ್ಯದರ್ಶಿಯಾದ ನಿರ್ಮಲ ರುಮಾದರ್,ಬಿಜೆಪಿ ಮಹಿಳಾ ಕಾಯ೯ಕತ೯ರಾದ ಪದ್ಮಮ್ಮ ಅಂಬಿಗರ, ಸುಶೀಲಮ್ಮ ಕುಂಬಾರ, ರುದ್ರಮ್ಮ,ಜಯಾ ಉಪಸ್ಥಿತರಿದ್ದರು.
ವರದಿ :-ಮಂಜುನಾಥ ಕುಂಬಾರ