You are currently viewing PV NEWS : “ಪ್ರಜಾವೀಕ್ಷಣೆ”– Google Analytics ಕಾರ್ಯಕ್ಷಮತಾ ವರದಿ..: ಡಿಜಿಟಲ್ ವೇದಿಕೆಯಲ್ಲಿ ಪ್ರಜಾವೀಕ್ಷಣೆಗೆ ಭರ್ಜರಿ ಬೆಳವಣಿಗೆ!

PV NEWS : “ಪ್ರಜಾವೀಕ್ಷಣೆ”– Google Analytics ಕಾರ್ಯಕ್ಷಮತಾ ವರದಿ..: ಡಿಜಿಟಲ್ ವೇದಿಕೆಯಲ್ಲಿ ಪ್ರಜಾವೀಕ್ಷಣೆಗೆ ಭರ್ಜರಿ ಬೆಳವಣಿಗೆ!

PV NEWS : “ಪ್ರಜಾವೀಕ್ಷಣೆ”– Google Analytics ಕಾರ್ಯಕ್ಷಮತಾ ವರದಿ..: ಡಿಜಿಟಲ್ ವೇದಿಕೆಯಲ್ಲಿ ಪ್ರಜಾವೀಕ್ಷಣೆಗೆ ಭರ್ಜರಿ ಬೆಳವಣಿಗೆ!

ಹೊಸ ಬಳಕೆದಾರರ ಸಂಖ್ಯೆಯಲ್ಲಿ ಶೇ.187.23ರಷ್ಟು ಏರಿಕೆ; 7 ದಿನಗಳ ಸಕ್ರಿಯ ಬಳಕೆದಾರರಲ್ಲಿ ಶೇ.278.9ರಷ್ಟು ಪ್ರಗತಿ

ಸತ್ಯದ ಪರವಾಗಿ ಹಾಗೂ ಸಮಾಜದ ಉನ್ನತಿಗಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ (PV NEWS) – ಕೊಪ್ಪಳ, ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ. ಜುಲೈ 1ರಿಂದ ಆಗಸ್ಟ್ 28ರವರೆಗಿನ Google Analytics ಕಾರ್ಯಕ್ಷಮತಾ ವರದಿಯ ಪ್ರಕಾರ, ಹಿಂದಿನ ಅವಧಿಯಾದ ಮೇ 3ರಿಂದ ಜೂನ್ 30ರವರೆಗೆ ಹೋಲಿಸಿದಾಗ ವೆಬ್‌ಸೈಟ್‌ನ ಓದುಗರ ಸಂಖ್ಯೆ ಮತ್ತು ಸಕ್ರಿಯ ಬಳಕೆದಾರರಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಹೊಸ ಓದುಗರ ಸೇರ್ಪಡೆಯಲ್ಲಿ ಭರ್ಜರಿ ಪ್ರಗತಿ..!

ವರದಿಯ ಪ್ರಮುಖ ಅಂಶವೆಂದರೆ ಹೊಸ ಬಳಕೆದಾರರ ಸಂಖ್ಯೆಯಲ್ಲಿ ಶೇ.187.23ರಷ್ಟು ಏರಿಕೆ ಕಂಡಿರುವುದು. ಒಟ್ಟು 7.27 ಸಾವಿರ ಹೊಸ ಬಳಕೆದಾರರು ವೆಬ್‌ಸೈಟ್‌ಗೆ ಭೇಟಿ ನೀಡಿರುವುದು, ಪ್ರಜಾವೀಕ್ಷಣೆಯ ಸುದ್ದಿ ವಿಷಯಗಳು ಹೊಸ ಪ್ರೇಕ್ಷಕರನ್ನು ತಲುಪುತ್ತಿರುವುದನ್ನು ಸೂಚಿಸುತ್ತದೆ.

ಸಕ್ರಿಯ ಓದುಗರ ಬಳಗ ಮತ್ತಷ್ಟು ವಿಸ್ತರಣೆ…!

ಜುಲೈ 1ರಿಂದ ಆಗಸ್ಟ್ 28ರವರೆಗೆ ಒಟ್ಟು 8,078 ಸಕ್ರಿಯ ಬಳಕೆದಾರರು ವೆಬ್‌ಸೈಟ್‌ಗೆ ಭೇಟಿ ನೀಡಿದ್ದಾರೆ. ಹಿಂದಿನ ಅವಧಿಗೆ ಹೋಲಿಸಿದರೆ ಇದು ಶೇ.167.22ರಷ್ಟು ಹೆಚ್ಚಳವಾಗಿದ್ದು, 5,055 ಬಳಕೆದಾರರ ಹೆಚ್ಚಳ ದಾಖಲಾಗಿದೆ.

ಅದೇ ರೀತಿ, 30 ದಿನಗಳ ಸಕ್ರಿಯ ಬಳಕೆದಾರರ ಸಂಖ್ಯೆ 4.25 ಸಾವಿರಕ್ಕೆ ತಲುಪಿದ್ದು, ಶೇ.137.96ರಷ್ಟು ಬೆಳವಣಿಗೆ ಕಂಡಿದೆ. 7 ದಿನಗಳ ಸಕ್ರಿಯ ಬಳಕೆದಾರರಲ್ಲಿ ಶೇ.278.9ರಷ್ಟು ಭರ್ಜರಿ ಏರಿಕೆ ದಾಖಲಾಗಿರುವುದು ಗಮನಾರ್ಹವಾಗಿದೆ.

24.1 ಸಾವಿರ ಈವೆಂಟ್‌ಗಳು ದಾಖಲು..!

Google Analytics ವರದಿಯ ಪ್ರಕಾರ, ಈ ಅವಧಿಯಲ್ಲಿ ವೆಬ್‌ಸೈಟ್‌ನಲ್ಲಿ ಒಟ್ಟು 24.1 ಸಾವಿರ ಈವೆಂಟ್‌ಗಳು ದಾಖಲಾಗಿವೆ. ಹಿಂದಿನ ಅವಧಿಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಶೇ.6.63ರಷ್ಟು ಏರಿಕೆ ಕಂಡುಬಂದಿದೆ.

ಡಿಜಿಟಲ್ ಬೆಳವಣಿಗೆಗೆ ಓದುಗರ ವಿಶ್ವಾಸವೇ ಬಲ..!

ಒಟ್ಟಾರೆ ಅಂಕಿ-ಅಂಶಗಳನ್ನು ಗಮನಿಸಿದರೆ, ಮೇ–ಜೂನ್ ಅವಧಿಗೆ ಹೋಲಿಸಿದಾಗ ಜುಲೈ–ಆಗಸ್ಟ್ ಅವಧಿಯಲ್ಲಿ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮದ ವೆಬ್‌ಸೈಟ್ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ವಿಶೇಷವಾಗಿ ಹೊಸ ಬಳಕೆದಾರರು ಮತ್ತು ನಿಯಮಿತವಾಗಿ ವೆಬ್‌ಸೈಟ್‌ಗೆ ಭೇಟಿ ನೀಡುವ ಸಕ್ರಿಯ ಓದುಗರ ಸಂಖ್ಯೆಯಲ್ಲಿನ ಏರಿಕೆ, ಮಾಧ್ಯಮದ ಡಿಜಿಟಲ್ ವ್ಯಾಪ್ತಿ ವಿಸ್ತರಿಸುತ್ತಿರುವುದಕ್ಕೆ ಪ್ರಮುಖ ಸೂಚಕವಾಗಿದೆ.

ನಿಖರ, ನಿಷ್ಪಕ್ಷಪಾತ ಹಾಗೂ ಜನಪರ ಸುದ್ದಿಗಳನ್ನು ಓದುಗರಿಗೆ ತಲುಪಿಸುವ ಉದ್ದೇಶದೊಂದಿಗೆ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ ತನ್ನ ಡಿಜಿಟಲ್ ಪಯಣವನ್ನು ಮತ್ತಷ್ಟು ಬಲಪಡಿಸುತ್ತಿದೆ.

ಸಂಸ್ಥೆಯ ವಿವರ:-

ಮಾಧ್ಯಮ: ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ – PV NEWS ಕನ್ನಡ 24×7

ಸ್ಥಳ: ಕೊಪ್ಪಳ

ಸಂಪಾದಕರು: ಚಂದ್ರು ಆರ್. ಭಾನಾಪುರ, 

ಸಹ ಸಂಪಾದಕರು : ವಿಶ್ವನಾಥ್ ಈ. ಪಿ. ಹಾಗೂ ಭೀಮಶಂಕರ್ ಪಿ.

ಇಮೇಲ್: prajavikshanenews@gmail.com

ವೆಬ್‌ಸೈಟ್: www.prajavikshane.com

“ಇದು ಪ್ರಜಗಳ ಹದ್ದಿನ ಕಣ್ಣು” = “ಸತ್ಯದ ಪರವಾಗಿ, ಸಮಾಜದ ಉನ್ನತಿಗಾಗಿ!”

Prajavikshane

Chandru R Bhanapaur

Leave a Reply

error: Content is protected !!