ಮುದಗಲ್ಲ ವರದಿ..
ಅಧಿಕಾರಿಗಳ ನಿರ್ಲಕ್ಷ್ಯ : ಸ್ವಂತ ಹಣದಲ್ಲಿ ರಸ್ತೆ ಗುಂಡಿ ಮುಚ್ಚಿದ ಸ್ಥಳೀಯ ಟ್ರಾಕ್ಟರ್ ಮಾಲೀಕರು..
ರಾಯಚೂರು – ಬೆಳಗಾವಿ ರಾಜ್ಯ ಹೆದ್ದಾರಿರಸ್ತೆ ಯಲ್ಲಿ
ಗುಂಡಿ ಬಿದ್ದ ರಸ್ತೆಗಳ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಕ್ಯಾರೆ ಎನ್ನಲಿಲ್ಲ. ಇದರಿಂದ ಬೇಸತ್ತ ಸ್ಥಳೀಯ ಟ್ರಾಕ್ಟರ್ ಮಾಲೀಕರು ಸೇರಿ
ಮುಖ್ಯರಸ್ತೆ ಗುಂಡಿಗೆ ಗರಜು ಮಣ್ಣು ಹಾಕಿ ದುರಸ್ತಿ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಗುಂಡಿ ಬಿದ್ದ ರಸ್ತೆಗಳ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಕ್ಯಾರೆ ಎನ್ನಲಿಲ್ಲ. ಇದರಿಂದ ಬೇಸತ್ತ ಮುದಗಲ್ಲ ಟ್ರಾಕ್ಟರ್ ಮಾಲೀಕರು ತಮ್ಮ ಟ್ರಾಕ್ಟರ್ ಬಳಸಿ ಸ್ವಂತ ಹಣದಲ್ಲಿ ರಸ್ತೆ ಗುಂಡಿಗೆ ಗರಜು ಮಣ್ಣು ಹಾಕಿ ದುರಸ್ತಿ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳಿಗೆ ಗರಜು ಮಣ್ಣು ಹಾಕಿ, ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

ನಂತರ ಮಾತನಾಡಿದ ನಾಗರಾಜ ಆಶಿಹಾಳ ಅವರು ಈ ರಸ್ತೆ ಡಾಂಬಾರು ಕಂಡು ಹಲವು ವರ್ಷಗಳಾಗಿವೆ. ಹೆಚ್ಚಿನ ಸಂಚಾರದಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ದುರಸ್ತಿಗೆ ಈ ಬಾಗದ ಮುದಗಲ್ಲ ಪಟ್ಟಣದ ಮುಖಂಡರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಗುಂಡಿ ಮುಚ್ಚದೆ ನಿರ್ಲಕ್ಷ ವಹಿಸಿದ್ದಾರೆ. ನಿತ್ಯ ಸಂಚಾರ ಮಾಡುವ ಬಸ್‌ಗಳು, ವಾಹನ ಗಳಿಗೆ ಸಮಸ್ಯೆ ಉಂಟಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಮಳೆಯಿಂದ ಈ ರಸ್ತೆಯಲ್ಲಿ ಮತ್ತೆ ಗುಂಡಿಗಳು ರಾರಾಜಿಸುತ್ತಿದ್ದವು. ಹೀಗಾಗಿ ಟ್ರಾಕ್ಟರ್ ಮಾಲೀಕರು ಸ್ಥಳೀಯ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕರ್ತರು 6-7 ಟ್ರೀಪ್ ಗರಜು ಮಣ್ಣುನ್ನು ಹಾಕಿ ಗುಂಡಿ ಮುಚ್ಚಿದ್ದೇವೆ. ಇನ್ನಾದರೂ ಸಂಬಂಧಪಟ್ಟ ಲೋಕೋಪ ಯೋಗಿ ಇಲಾಖೆಯವರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು. ಬಾಕಿ ಉಳಿದಿರುವ ರಸ್ತೆಗೆ ಡಾಂಬರು ಹಾಗೂ ಕಾಂಕ್ರೀಟ್ ಹಾಕಿಸುವ ಮೂಲಕ ಪಟ್ಟಣದ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಾಗರಾಜ ಆಶಿಹಾಳ ಅವರು ಆಗ್ರಹಿಸಿದ್ದಾರೆ.
ನಂತರ ಮಾತನಾಡಿದ ಸಾಬು ಹುಸೇನ್ ಅವರು ʼಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿವೆ. ರಸ್ತೆ ಗುಂಡಿ ಸಮಸ್ಯೆಯಿಂದ ಕೆಲ ಸವಾರರು ಬಿದ್ದು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಪಂಚ ಗ್ಯಾರಂಟಿ ಯೋಜನೆ ಯಿಂದ ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲವೇʼ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಕಳಕಳಿಯ ಟ್ರಾಕ್ಟರ್ ಮಾಲೀಕರಲ್ಲಿ ಪ್ರಮುಖರಾದ ಹಾಗೂ ಸಮಾಜಿಕ ಕಾಳಜಿ ಇರುವ ಶಾಲಂ ಟೈಲರ್ ,ಟ್ರಾಕ್ಟರ್ ಮಾಲೀಕರಾದ ಸಾಬು ಹುಸೇನ್ ,ಹುಸೇನ್ ಬಾಷ ಡೊಂಗ್ರಿ ,ನಾಗರಾಜ್ ಆಶಿಹಾಳ ತಾಂಡ,ಮಾಹಾಂತೇಶ ಬೋವಿ, ಚಾಂದ ಹುಸೇನ್ ಜಂಬಾಳಿ ಸೇರಿದಂತೆ ಮತ್ತಿತರರಿದ್ದರು.
ವಿಶೇಷ ವರದಿ :-ಮಂಜುನಾಥ ಕುಂಬಾರ