ಮುದಗಲ್ಲ ವರದಿ…
ನರೇಂದ್ರ ಮೋದಿಜಿಯವರ 75ನೇ ಜನ್ಮದಿನ ಪ್ರಯುಕ್ತ ಬಿಜೆಪಿ ಮುದಗಲ್ಲ ಘಟಕದಿಂದ ರೋಗಿಗಳಿಗೆ ಹಣ್ಣು ವಿತರಣೆ…

ಮುದಗಲ್ಲ :-ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಬುಧವಾರ ಬಿಜೆಪಿ ಮುದಗಲ್ಲ ಘಟಕದಿಂದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಬುಧವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುದಗಲ್ಲ ಮಂಡಲದ ವತಿಯಿಂದ ಸಿಹಿ ವಿತರಿಸಿದರು. ಬಳಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ನವಜಾತ ಶಿಶುವಿನ ತಾಯಂದರಿಗೆ ಸೇಬು ಹಣ್ಣುಗಳನ್ನು ರೋಗಿಗಳಿಗೆ ಹಾಲು ಹಣ್ಣು ವಿತರಣೆ. ಮಾಡಲಾಯಿತು ಹಾಗೂ ನಂತರ ಸಸಿ ನೆಡುವ ಕಾರ್ಯಕ್ರಮ ಹಾಗೂ ಪುರಾತನ ದೇವಸ್ಥಾನಗಳ ಸ್ವಚ್ಛತಾ ಕಾರ್ಯಕ್ರಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಹಣ್ಣು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುದಗಲ್ಲ ಬಿಜೆಪಿ ಘಟಕದ ಅಧ್ಯಕ್ಷರಾದ ಹುಲ್ಲೇಶ ಸಾಹುಕಾರ ಕಾಚಾಪುರ ,ಮುದಗಲ್ಲ ನಗರ ಘಟಕದ ಅಧ್ಯಕ್ಷರಾದ ಕರಿಯಪ್ಪ ಯಾದವ, ಸಣ್ಣ ಸಿದ್ದಯ್ಯ ಮೆಗಳಪೇಟೆ ,ಉದಯ ಕುಮಾರ್ ಕಂಬಾರ, ಮಲ್ಲಪ್ಪ ಮಾಟೂರ್,ಮಂಜನಾಥ ನಂದವಾಡಗಿ ,ನಾಗರಾಜ ತಳವಾರ,
ಶರಣಪ್ಪ ಹಂಚನಾಳ,ರವಿ ಕಟ್ಟಿಮನಿ, ಹಾಗೂ ನೂರಾರು ಕಾಯ೯ಕತ೯ರು ಉಪಸ್ಥಿತರಿದ್ದರು…
ವರದಿ:- ಮಂಜುನಾಥ ಕುಂಬಾರ