ಮುದಗಲ್ಲ ಪಟ್ಟಣದ ಸಿದ್ಧಾರ್ಥ ನಗರದ ಚಲುವಾದಿ ಓಣಿಯ ಕಂಠಿ ದುರಗಮ್ಮ ದೇವಸ್ಥಾನ ದ ಜಾತ್ರಾ ಮಹೋತ್ಸವ ನಿಮಿತ್ಯ ಕಳಸ ಮೆರವಣಿಗೆ…

ಮುದಗಲ್ಲ ವರದಿ..

ಮುದಗಲ್ಲ ಪಟ್ಟಣದ ಸಿದ್ಧಾರ್ಥ ನಗರದ ಚಲುವಾದಿ ಓಣಿಯ ಕಂಠಿ ದುರಗಮ್ಮ ದೇವಸ್ಥಾನ ದ ಜಾತ್ರಾ ಮಹೋತ್ಸವ ನಿಮಿತ್ಯ ಕಳಸ ಮೆರವಣಿಗೆ…

ಮುದಗಲ್ಲನಲ್ಲಿ ಶ್ರಾವಣ ಮಾಸದ ನಡೆಯುವ ಶ್ರೀ ಕಂಠಿ ದುರಗಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಕಳಸ ಮೆರವಣಿಗೆಯು ಚಲುವಾದಿ ಭಕ್ತರಿಂದ ಶ್ರದ್ಧೆ ಭಕ್ತಿಯಿಂದ ನಡೆಯಿತು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಐತಿಹಾಸಿಕ ಪಟ್ಟಣವಾದ ಮುದಗಲ್ಲನಲ್ಲಿ ಕಂಠಿದುರಗಮ್ಮ ದೇವಸ್ಥಾನ ದೇವಿಯ ಸ್ಥಳೀಯ ವಾಗಿ ಅಪಾರ ಭಕ್ತರಿದ್ದಾರೆ.

ಪ್ರತಿವರ್ಷ ಶ್ರಾವಣ ಸೋಮವಾರ ಕಂಠಿ ದುರಗಮ್ಮ ದೇವಸ್ಥಾನದ ಕಳಸದ ಭವ್ಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಳಸ ಮೆರವಣಿಗೆ ನಡೆಯಿತು ನೂರಾರು ಸುಮಂಗಲಿ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಕೈ ಯಲ್ಲಿ ಕಳಸ ಹೊತ್ತು ಸಾಗುತ್ತಾರೆ.ಮಂಗಳ ವಾದ್ಯಗಳ ಡೊಳ್ಳು ಕುಣಿತ ಭಜನಾ ಮಂಡಳಿಗಳು ಮೆರವಣಿಗೆಗೆ ಕಳೆ ತುಂಬುತ್ತವೆ.

ಕಳಸದ ಭವ್ಯ ಮೆರವಣಿಗೆಯು ಮುದಗಲ್ಲ ಪಟ್ಟಣದ ಪ್ರಮುಖ ರಸ್ತೆ ಹಾಗೂ ಚೌಕಗಳ ಮೂಲಕ ಸಾಗಿ ದೇವಸ್ಥಾನವನ್ನು ತಲುಪುತ್ತದೆ ದೇವಿಯ ಜಯಘೋಷ: ಭಕ್ತರು ಮೆರವಣಿಗೆಯುದ್ದಕ್ಕೂ ಕಂಠಿ ದುರಗಮ್ಮ”ಉಧೋ ಉಧೋ ಹುಲಿಗೆಮ್ಮ” ಎಂದು ಜಯಘೋಷ ಕೂಗುತ್ತಾ ಭಕ್ತಿ ಸಮರ್ಪಿಸುತ್ತಾರೆ. ವಿಶೇಷ ಪೂಜೆಗಳು: ದೇವಸ್ಥಾನ ತಲುಪಿದ ನಂತರ ಕಳಸಗಳನ್ನು ಪ್ರತಿಷ್ಠಾಪಿಸಿ, ದೇವಿಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯುತ್ತದೆ ಹಾಗೂ ಭಕ್ತರಿಗೆ ಅನ್ನ ಪ್ರಸಾದ್ ವ್ಯವಸ್ಥೆ ಮಾಡಿದ್ದರು

ಈ ಸಂದರ್ಭದಲ್ಲಿ ಗುಂಡಪ್ಪ ಗಂಗಾವತಿ, ಹೇಮಂತ್ ನಾಗಲಾಪೂರ, ಸುರೇಶ,ಗಣೇಶ ಸಂತೋಷ,ಅಮರೇಶ ,ಹನುಮಂತ ಬಜಂತ್ರಿ, ರವಿ, ಮಂಜುನಾಥ , ರಮೇಶ್ ಬಂಕದಮನಿ, ಉಮೇಶ್ ಬಂಕದಮನೆ, ವಿರೇಶ ಕಳಗಡೆಮನೆ,ಸಂಜೀವ, ಸಿದ್ದ, ಹುಸೇನಪ್ಪ, ಗೌತಮ್ಮ ,ವಿನಯ ಕುಮಾರ್ ,ಶರಣ,ಪೂಣ೯ನಂದ, ಅನಿಲ್ ,ಪ್ರಭು ದೇವು,ಅಶೋಕ, ಉಪಸ್ಥಿತರಿದ್ದರು.

 ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!