You are currently viewing PV NEWS : ಕುಕನೂರಿನ ಹಿರಿಯ ನಾಯಕ ಕಾಶೀಮಸಾಬ್ ತಳಕಲ್ ನಿಧನ!

PV NEWS : ಕುಕನೂರಿನ ಹಿರಿಯ ನಾಯಕ ಕಾಶೀಮಸಾಬ್ ತಳಕಲ್ ನಿಧನ!

PV NEWS : ಕುಕನೂರಿನ ಹಿರಿಯ ನಾಯಕ ಕಾಶೀಮಸಾಬ್ ತಳಕಲ್ ನಿಧನ!

ಕಾಂಗ್ರೆಸ್‌ನ ಹಿರಿಯ ಮುತ್ಸದ್ದಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರ ಅಗಲಿಕೆ; ಇಂದು ಸಂಜೆ ಅಂತ್ಯಕ್ರಿಯೆ..!

PV NEWS ಕನ್ನಡ 24×7|

ಕುಕನೂರು, ಸೆ. 8: ಕುಕನೂರು ಪಟ್ಟಣದ ಮುಸ್ಲಿಂ ಸಮಾಜದ ಹಿರಿಯರು, ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿ ರಾಜಕಾರಣಿ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಕಾಶೀಮಸಾಬ್ ತಳಕಲ್ ಅವರು ಮಂಗಳವಾರ (ಸೆ. 8) ಮುಂಜಾನೆ 5 ಗಂಟೆಗೆ ನಿಧನರಾಗಿದ್ದಾರೆ.

ಅವರು ಸಾರ್ವಜನಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸರಳತೆ, ಸೌಹಾರ್ದತೆ ಹಾಗೂ ಜನಪರ ಕಾಳಜಿಯಿಂದಾಗಿ ಕುಕನೂರು ಭಾಗದಲ್ಲಿ ಅಪಾರ ಬಂದು-ಮಿತ್ರರು ಹಾಗೂ ಅಭಿಮಾನಿಗಳನ್ನು ಹೊಂದಿದ್ದರು.

ಕಾಶೀಮಸಾಬ್ ತಳಕಲ್ ಅವರ ನಿಧನದಿಂದ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಮುಸ್ಲಿಂ ಸಮಾಜದವರು ಸೇರಿದಂತೆ ಅಪಾರ ಸಂಖ್ಯೆಯವರು ದುಃಖಿತರಾಗಿದ್ದಾರೆ.

ಅಂತ್ಯಕ್ರಿಯೆ ಇಂದು:

ಕಾಶೀಮಸಾಬ್ ತಳಕಲ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಕುಕನೂರು ಪಟ್ಟಣದ ಮುಸ್ಲಿಂ ಸಮಾಜದ ಖಬರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅವರ ನಿಧನಕ್ಕೆ ವಿವಿಧ ರಾಜಕೀಯ ಮುಖಂಡರು, ಸಮಾಜದ ಗಣ್ಯರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!