BIG NEWS : ಬೆಂಗಳೂರು | ರಾಜ್ಯಾದ್ಯಂತ ಲೋಕಾಯುಕ್ತ ಮೆಗಾ ರೇಡ್: 8 ಅಧಿಕಾರಿಗಳ 33 ಸ್ಥಳಗಳಲ್ಲಿ ಶೋಧ!
PV NEWS ಕನ್ನಡ 24×7 :
ಬೆಂಗಳೂರು, ಸೆ. 23: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಮಂಗಳವಾರ ರಾಜ್ಯಾದ್ಯಂತ ಮೆಗಾ ರೇಡ್ ನಡೆಸಿದ್ದಾರೆ. ಬೆಂಗಳೂರು ನಗರ, ಕಲಬುರಗಿ, ಮಂಡ್ಯ, ಕೊಡಗು, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಬೀದರ್ ಹಾಗೂ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 8 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 33 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಶೋಧದ ವೇಳೆ ಅಧಿಕಾರಿಗಳಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳ ವಿವರಗಳು ಪತ್ತೆಯಾಗಿವೆ. ಲೋಕಾಯುಕ್ತದ ಪ್ರಾಥಮಿಕ ಮಾಹಿತಿಯಂತೆ, ಒಟ್ಟು ₹29.61 ಕೋಟಿಗೂ ಅಧಿಕ ಮೌಲ್ಯದ ಸ್ಥಿರ–ಚರ ಆಸ್ತಿಗಳ ವಿವರಗಳು ಬೆಳಕಿಗೆ ಬಂದಿದ್ದು, ದಾಖಲೆಗಳು, ಬ್ಯಾಂಕ್ ಖಾತೆಗಳು ಹಾಗೂ ಲಾಕರ್‌ಗಳ ಪರಿಶೀಲನೆ ಮುಂದುವರಿದಿದೆ.