ಮುದಗಲ್ಲ ಪುರಸಭೆ  ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ..

ಮುದಗಲ್ಲ ವರದಿ..

ಮುದಗಲ್ಲ ಪುರಸಭೆ  ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ..

ಮುದಗಲ್ಲ ಪುರಸಭೆ ಯ ಕಛೇರಿಯಲ್ಲಿ ಮೊದಲಿಗೆ ತಾಯಿ ಭುವನೇಶ್ವರಿ ದೇವಿ ಭಾವ ಚಿತ್ರಕ್ಕೆ ಪುರಸಭೆಯ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಅವರು
ಪೂಜೆ ಸಲ್ಲಿಸಿದ್ದರು

ಪುರಸಭೆಯ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಮಾತನಾಡುತ್ತಾ, ಕನ್ನಡ ಭಾಷೆಯ ಬೆಳವಣಿಗೆಯ ದರ ಈಗ ಶೇಕಡಾ 3.73 ರಷ್ಟು ಮಾತ್ರ ಇದ್ದು, ಅದು ಇನ್ನಷ್ಟು ಕುಸಿಯದಂತೆ ಕನ್ನಡಿಗರು
ಎಚ್ಚೆತ್ತುಕೊಂಡು ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ
ಹೊರಬೇಕು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ನಮ್ಮ ಎಡ ಬಲಗಳಲ್ಲಿ ಹಾಗೂ ಮನೆಭಾಷೆ, ಆಡುಭಾಷೆಗಳನ್ನು ಅಂತರಂಗದಲ್ಲಿ ಇಟ್ಟುಕೊಂಡು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಮುದಗಲ್ಲ ಕರವೇ ಅಧ್ಯಕ್ಷ ರಾದ S.N ನಹಿಮ್ ಅವರು ರಾಜ್ಯೋತ್ಸವದ ಕುರಿತು ಮಾತನಾಡಿದ್ದರು ನವೆಂಬರ್ 1 ರಂದು ರಾಜ್ಯದಾದ್ಯಂತ ಅತ್ಯಂತ ಸಂತೋಷ ಮತ್ತು ಸಡಗರದಿಂದ ಆಚರಿಸಲಾಗುತ್ತದೆ.
ಕನ್ನಡವನ್ನು ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿಹಿಡಿಯಬೇಕು. ನಾವು ‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರ ದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಬದ್ಧರಾಗಿರೋಣ’ ಎಂದು ಈ ವೇಳೆ ಮಾತನಾಡಿರು,

ಈ ಸಂಧರ್ಭದಲ್ಲಿ ಮ್ಯಾನೇಜರ್ ಸುರೇಶ, ವೆಂಕಟೇಶ್,ಬಸವರಾಜ ಕೊಟ್ಟೂರ, ಹಾಗೂ ಕರವೇ ನಗರ ಘಟಕದ ಅಧ್ಯಕ್ಷ ಸಾಬು ಹುಸೇನ್,ಹಾಗೂ ಸ್ವಾಭಿಮಾನಿ ಸೇನೆ ಎಸ್ ಎನ್ ಖಾದ್ರಿ ಸಾಬು ಹುಸೇನ್ ಮಹಾಂತೇಶ್ ಶೆಟ್ಟರ್ ಇಮಾಮ್ ಸಾಬ್ ಮೈಬೂಬ್ ಕಡ್ಡಿಪುಡಿ ಜಮೀರ್ ಸಾಬ್ ಜಮಾಲಿಸಾಬ್ ಹಾಗೂ ಎಚ್ ಎಮ್ ಶಿವಕುಮಾರ್ ಕನ್ನೂರ್ ಡಾಕ್ಟರ್ ಆಯುಷ್ ಅಧಿಕಾರಿ ಪಂಪಣ್ಣ ಜಾವೂರ್ ಮರಿಯಪ್ಪ ತಳವಾರ್ ಹಾಗೂ ಊರಿನ ಮುಖಂಡರುಗಳು ಇದ್ದರು

ವರದಿ: ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!