You are currently viewing PV NEWS : ಕುಕನೂರು | ಗವಿಮಠದ ಸೇವೆ ಅರಿತು ಸಾಹಿತಿ ಬಸವರಾಜ ಸಬರದ ಮಾತನಾಡಲಿ: ಹಿರಿಯ ಸಾಹಿತಿ ಕೆ.ಬಿ. ಬ್ಯಾಳಿ

PV NEWS : ಕುಕನೂರು | ಗವಿಮಠದ ಸೇವೆ ಅರಿತು ಸಾಹಿತಿ ಬಸವರಾಜ ಸಬರದ ಮಾತನಾಡಲಿ: ಹಿರಿಯ ಸಾಹಿತಿ ಕೆ.ಬಿ. ಬ್ಯಾಳಿ

PV NEWS : ಕುಕನೂರು | ಗವಿಮಠದ ಸೇವೆ ಅರಿತು ಸಾಹಿತಿ ಬಸವರಾಜ ಸಬರದ ಮಾತನಾಡಲಿ: ಹಿರಿಯ ಸಾಹಿತಿ ಕೆ.ಬಿ. ಬ್ಯಾಳಿ

ಕೊಪ್ಪಳ ಗವಿಮಠದ ಸಾಮಾಜಿಕ, ಶೈಕ್ಷಣಿಕ ಕೊಡುಗೆ ಸ್ಮರಿಸಿದ ಹಿರಿಯ ಸಾಹಿತಿ!

ಕುಕನೂರು, ನ. 2: ಕೊಪ್ಪಳ ಗವಿಮಠದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆಯನ್ನು ಅರಿತುಕೊಂಡು ಸಾಹಿತಿ ಬಸವರಾಜ ಸಬರದ ಮಾತನಾಡಬೇಕು ಎಂದು ಹಿರಿಯ ಸಾಹಿತಿ ಕೆ.ಬಿ. ಬ್ಯಾಳಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಕೊಪ್ಪಳ ಗವಿಮಠ ಈ ಭಾಗದ ಪ್ರತಿಷ್ಠೆಯ ಸಂಕೇತವಾಗಿದೆ. ಶಿಕ್ಷಣ, ಅನ್ನದಾಸೋಹ ಮತ್ತು ಆಶ್ರಯ ನೀಡುವ ಮೂಲಕ ಬಡವರು ಹಾಗೂ ಸಾಮಾನ್ಯ ಜನರ ಬದುಕಿಗೆ ಆಸರೆಯಾಗಿದೆ. ಹಿಂದಿನ ಶ್ರೀಗಳು ಆರಂಭಿಸಿದ ಸೇವಾ ಪರಂಪರೆಯನ್ನು ಈಗಿನ ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು.

ಗವಿಮಠದ ಶ್ರೀಗಳು ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಹಿರೇಹಳ್ಳ ಹಾಗೂ ಗಿಣಿಗೇರಿ ಕೆರೆ ಸ್ವಚ್ಛತಾ ಕಾರ್ಯಗಳ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದ್ದಾರೆ. ಹಟ್ಟಿ ಮುಂಡರಗಿ, ಗಿಣಿಗೇರಿ ಭಾಗಗಳಲ್ಲಿ ಹಲವು ವರ್ಷಗಳಿಂದ ಪರಿಸರ ಮಾಲಿನ್ಯದ ಸಮಸ್ಯೆ ಇದ್ದರೂ ಆಗ ಹೆಚ್ಚಿನ ಧ್ವನಿ ಕೇಳಿಬಂದಿರಲಿಲ್ಲ. ಇದೀಗ ಬಳ್ಳಾರಿಯಿಂದ ಕೊಪ್ಪಳದವರೆಗೂ ಮಾಲಿನ್ಯದ ಆತಂಕ ಎದುರಾಗಿದೆ. ಸುತ್ತಮುತ್ತಲಿನ ಪ್ರದೇಶಗಳ ಸ್ಥಿತಿಯ ಬಗ್ಗೆಯೂ ಗಮನಹರಿಸಬೇಕಿದೆ ಎಂದು ತಿಳಿಸಿದರು.

ಗವಿಮಠದ ವಿರುದ್ಧ ಹೋರಾಟ ಮಾಡುವುದಾಗಿ ಬಸವರಾಜ ಸಬರದ ಹೇಳಿರುವುದು ನೋವು ತಂದಿದೆ. ಇದೇ ಮಠದಲ್ಲಿ ವಿದ್ಯಾಭ್ಯಾಸ ಪಡೆದಿರುವ ಅವರು, ಮಠದ ಸೇವೆ ಮತ್ತು ಕೊಡುಗೆಗಳನ್ನು ಪರಿಗಣಿಸಿ ಮಾತನಾಡಬೇಕಿತ್ತು. ಹೋರಾಟಗಾರರು ಸೂಕ್ತ ಮಾಹಿತಿ ಪಡೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಹೇಳಿದರು.

ಒಂದು ವರ್ಷದ ಹೋರಾಟದ ನೆಪದಲ್ಲಿ ಮಠದ ಸೇವಾ ಕಾರ್ಯಗಳಿಗೆ ಅಡ್ಡಿಯಾಗಬಾರದು. ಹೋರಾಟದಲ್ಲಿ ಭಾಗವಹಿಸುವುದು ಅಥವಾ ಬಿಡುವುದು ಶ್ರೀಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಕೆ.ಬಿ. ಬ್ಯಾಳಿ ಅಭಿಪ್ರಾಯಪಟ್ಟರು.

Prajavikshane

Chandru R Bhanapaur

Leave a Reply

error: Content is protected !!