KOPPAL NEWS : ಕೊಪ್ಪಳ | “ಬಾಲ್ಯವಿವಾಹ, ಸ್ತ್ರೀಭ್ರೂಣ ಹತ್ಯೆ ಮತ್ತು ಬಾಲ ಗರ್ಭೀಣಿ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರಕ್ಕೆ ಎಐಎಂಎಸ್‌ ಎಸ್‌ ಆಗ್ರಹ”

You are currently viewing KOPPAL NEWS : ಕೊಪ್ಪಳ | “ಬಾಲ್ಯವಿವಾಹ, ಸ್ತ್ರೀಭ್ರೂಣ ಹತ್ಯೆ ಮತ್ತು ಬಾಲ ಗರ್ಭೀಣಿ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರಕ್ಕೆ ಎಐಎಂಎಸ್‌ ಎಸ್‌ ಆಗ್ರಹ”

ಕೊಪ್ಪಳ | “ಬಾಲ್ಯವಿವಾಹ, ಸ್ತ್ರೀಭ್ರೂಣ ಹತ್ಯೆ ಮತ್ತು ಬಾಲ ಗರ್ಭೀಣಿ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರಕ್ಕೆ ಎಐಎಂಎಸ್‌ ಎಸ್‌ ಆಗ್ರಹ”

 

 

ಪ್ರಜಾ ವೀಕ್ಷಣೆ ನ್ಯೂಸ್‌ : 

ಕೊಪ್ಪಳ : ಮಹಿಳೆಯರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅಶ್ಲೀಲತೆ, ಮದ್ಯಪಾನದ ಹಾವಳಿಯ ವಿರುದ್ಧ ದೇಶವ್ಯಾಪಿ ಪ್ರತಿಭಟನಾ ಸಪ್ತಾಹದ ಭಾಗವಾಗಿ ಅಖಿಲ ಭಾರತ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ ಎಸ್‌) ಕೊಪ್ಪಳ  ಜಿಲ್ಲಾ ಸಂಘಟನಾ ಸಮಿತಿ ಯಿಂದ ಅಶೋಕ ಸರ್ಕಲ್ ನಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ದ ಘೋಷಣೆ ಕೂಗಿ  ಆಕ್ರೋಶ ಹೊರ ಹಾಕಿದರು.

ಪ್ರತಿಭಟನಾ ಪ್ರದರ್ಶನ ವನ್ನು  ಉದ್ದೇಶಿಸಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶಾರದಾ ಗಡ್ಡಿ ಮಾತನಾಡಿ, ನಮ್ಮ ಮಹಿಳಾ ಸಂಘಟನೆಯು  ದೇಶದಾದ್ಯಂತ ಮಹಿಳೆಯರ ಹಕ್ಕುಗಳಿಗಾಗಿ, ಮಹಿಳೆಯರ ಘನತೆಯ ಬದುಕಿಗಾಗಿ ಹೋರಾಡಲು  ಶ್ರಮಿಸುತ್ತಿದೆ. ಹಳೆಯ ಊಳಿಗಮಾನ್ಯ ವ್ಯವಸ್ಥೆಯ ಪುರುಷ ಪ್ರಧಾನ ಮೌಲ್ಯಗಳ ಜೊತೆಗೆ ಇಂದಿನ ಹೆಣ್ಣು ಭೋಗದ ವಸ್ತು ಎಂಬಂತೆ ಬಿತ್ತರಿಸುವ ಅಶ್ಲೀಲ-ಸಿನಿಮಾ ಸಾಹಿತ್ಯ, ಜಾಹಿರಾತುಗಳು, ಪೋರ್ನ್ ವೆಬ್ ಸೈಟ್ ಗಳು, ಮದ್ಯ- ಮಾದಕ ವಸ್ತುಗಳು ಯುವ ಜನತೆಯನ್ನು ದಾರಿ ತಪ್ಪಿಸುತ್ತಿವೆ. ಸಮಾಜದಲ್ಲಿ ಅಪರಾಧಗಳು ಹೆಚ್ಚುವಂತೆ ಪ್ರೇರೇಪಿಸುತ್ತಿವೆ. ಸಾಮಾಜಿಕ ವಾತಾವರಣದಲ್ಲಿ ಮೌಲ್ಯಗಳು ಕುಸಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಬಾಲ್ಯ ವಿವಾಹ, ಸ್ತ್ರೀ ಭ್ರೂಣ ಹತ್ಯೆ, ಲಿಂಗ ತಾರತಮ್ಯ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಅಪೌಷ್ಟಿಕತೆ, ಅಭದ್ರತೆ ಹಾಗೂ ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಎಲ್ಲಾ ಸ್ಥರದ ಮಹಿಳಾ ಸಮುದಾಯವನ್ನು ಸಂಘಟಿಸುತ್ತಿದೆ. ಮಹಿಳೆ ಮತ್ತು ಮಕ್ಕಳ ಮೇಲೆ ದೇಶಾದ್ಯಂತ ನಡೆಯುತ್ತಿರುವ ಘೋರ ಅತ್ಯಾಚಾರ, ಗುಂಪು ಅತ್ಯಾಚಾರ ಮತ್ತು ಕೊಲೆಗಳು, ಆ ಪ್ರಕರಣಗಳ ತಾರ್ಕಿಕ ಹಂತಕ್ಕೆ ತಲುಪಲು ದೀರ್ಘಕಾಲ ತೆಗೆದುಕೊಳ್ಳುವುದು, ಹಲವು ಪ್ರಕರಣಗಳಲ್ಲಿ ಪ್ರಭಾವೀ ಆರೋಪಿಗಳು ಖುಲಾಸೆಯಾಗಿರುವುದು ಅಥವಾ ನಿಜವಾದ ಆರೋಪಿಗಳು ಸಿಗದೇ ಇರುವುದು ಸಾರ್ವಜನಿಕರಲ್ಲಿ ಸಿಟ್ಟು ಮಡುಗಟ್ಟುವಂತೆ ಮಾಡಿದೆ ಎಂದರು.

ರಾಜ್ಯದಲ್ಲಿ 2024- 25ರ ಅವಧಿಯಲ್ಲಿ 700ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ವರದಿಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ (2023-ಜುಲೈ 2025) 80,813 ಬಾಲ ಗರ್ಭಿಣಿ ಪ್ರಕರಣಗಳು (ಆರ್ ಸಿ ಎಚ್ ಪೋರ್ಟಲ್) ಪತ್ತೆಯಾಗಿರುವುದು ಆತಂಕ ತಂದಿದೆ ಎಂದರು.

ರಾಜ್ಯದ ಮಹಿಳೆಯರ ಗಟ್ಟಿ ಧ್ವನಿಯಾಗಿ ಅಖಿಲ ಭಾರತ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ ಎಸ್‌)  ಸಂಘಟನೆಯು ಹೋರಾಟಗಳ ಮೂಲಕ ಸರ್ಕಾರಗಳ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ  ಜಿಲ್ಲಾ ಜಂಟಿ ಕಾರ್ಯದರ್ಶಿ ಹುಸೇನ್ ಬೀ ಹಾಗೂ ಕಾರ್ಯಕರ್ತೆಯರಾದ  ಭವ್ಯಶ್ರೀ, ಗೀತಾ, ಪೂರ್ಣಿಮಾ , ಅನ್ನಪೂರ್ಣ , ವಿನುತಾ, ಅಂಜಲಿ  ಸೇರಿದಂತೆ   ವಿದ್ಯಾರ್ಥಿನಿಯರು ಭಾಗವಹಿಸಿದರು,

Leave a Reply

error: Content is protected !!