ಮುದಗಲ್ಲ ವರದಿ
ಬೀದಿ ನಾಯಿಗಳ ಹಾವಳಿ ತಡೆಗೆ ಆಗ್ರಹ..
ಮುದಗಲ್ಲ ಪುರಸಭೆಯ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಮನವಿ.
ಮುದಗಲ್ ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೀದಿ ನಾಯಿಗಳು ಗುಂಪು ಗುಂಪಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದು,

ಸಾರ್ವಜನಿಕರು, ಮಕ್ಕಳು, ವೃದ್ಧರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಕುರಿ ಮರಿಗಳನ್ನು ದಾಳಿ ಮಾಡಿ ಅವುಗಳನ್ನು ತಿಂದು ಹಾಕುತ್ತಿರುವ ಘಟನೆಗಳು ನಡೆದಿದ್ದು ಕುರಿ ಸಾಕಾಣಿಕೆ ದಾರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಬಸ್ ನಿಲ್ದಾಣ, ಮಾರ್ಕೆಟ್ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಭಯ ಪಡುವಂತಾಗಿದೆ.
ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಸಾರ್ವಜನಿಕರಿಗೆ ಕಚ್ಚುತ್ತಿವೆ. ಕೆಲವು ಪ್ರದೇಶದಲ್ಲಿ ಹಿಂಡು ಹಿಂಡಾಗಿ ಬೀದಿನಾಯಿಗಳು ತಿರುಗಾಡಿ ಸಾರ್ವಜನಿಕರಿಗೆ ಭಯ ಮೂಡಿಸುತ್ತಿವೆ. ದ್ವಿಚಕ್ರ ವಾಹನಗಳ ಬೆನ್ನು ಹತ್ತುವುದು, ಅಡ್ಡಗಟ್ಟಿ ಕಚ್ಚಲು ಬರುತ್ತಿವೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಆದೇಶವಿದ್ದರೂ ಪುರಸಭೆ ಈ ವರೆಗೆ ಯಾವ ಕ್ರಮ ಕೈಗೊಂಡಿಲ್ಲ. ಬೀದಿ ನಾಯಿಗಳನ್ನು ನಿಯಂತ್ರಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿಗೆ ಪ್ರವೀಣ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು
ಸರ್ಕಾರದ ನಿರ್ದೇಶನದಂತೆ ಬೀದಿ ನಾಯಿಗಳ ನಿಯಂತ್ರಣ ಟೆಂಡರ್ ಕರೆಯಲಾಗಿದೆ. ಪುರಸಭೆ ಕೂಡ ಸಹಕಾರ ನೀಡಿ, ಶೀಘ್ರ ಬೀದಿ ನಾಯಿ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳ ಲಾಗುವುದು.
ಪುರಸಭೆ ಮುಖ್ಯಾಧಿಕಾರಿಗೆ ಪ್ರವೀಣ್ ಕುಮಾರ್

ಬೀದಿ ನಾಯಿಗಳ ಹಾವಳಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕಿಲ್ಲಾ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಕೖಗೊಳ್ಳಿ
ಮೖಬು ಕಡ್ಡಿಪುಡಿ ಪುರಸಭೆ ಮಾಜಿ ಸದಸ್ಯರು

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮೈಬೂಬ್ ಕಡ್ಡಿಪುಡಿ, ಎಸ್ ಎನ್ ಖಾದ್ರಿ, ಎಂ ಡಿ ರಫಿ, ಸಾಬು ಹುಸೇನ್, ಜಮೀರ್ ಪಾಷಾ, ಪಾಷಾಕಡ್ಡಿಪುಡಿ, ಫಾರೂಕ್ ಎಂಟು ಬಂಡಿ, ಶಾಲಂ ಡ್ರೈವರ್, ಹುಸೇ ನೈನ್ ಕಾಲಿಗಾರ್, ಹುಸೇನ್ ಭಾಷಾ ಗಂಗಾವತಿ, ಕಾಸಿಮ್ ಡೋಯಿ, ಶಿವಕುಮಾರ, ಹಸೀನಾ ಬೇಗಂ, ನಿಲಾಪರ್ ಬೇಗಂ, ರೇಷ್ಮಾ, ಖೈರುನ್ ಬೇಗಂ, ಚಾಂದ್ ಬೇಗಂ ಸೇರಿದಂತೆ ಮುಂತಾದವರು ಇದ್ದರು.
ವರದಿ :-ಮಂಜುನಾಥ ಕುಂಬಾರ
