ಮುದಗಲ್ಲ :-ನಾಡ ಕಛೇರಿಯಲ್ಲಿ ಸಂವಿಧಾನ ದಿನಾಚರಣೆ.

ಮುದಗಲ್ಲ ವರದಿ..

ಮುದಗಲ್ಲ :-ನಾಡ ಕಛೇರಿ ಯಲ್ಲಿ ಸಂವಿಧಾನ ದಿನಾಚರಣೆ.

ಮುದಗಲ್ಲ:- ಪಟ್ಟಣದ ನಾಡ ಕಛೇರಿಯಲ್ಲಿ ಸಂವಿಧಾನ ದಿನಾಚರಣೆ ಆಚರಣೆ ಮಾಡಲಾಯಿತು

ಸಂದರ್ಭದಲ್ಲಿ ಉಪ ತಹಶೀಲ್ದಾರ್ ತುಳಜರಾಮ ಸಿಂಗ ಅವರು ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಭಾರತದ ಸಂವಿಧಾನದ ಪ್ರಸ್ತಾವನೆ ಗೆ ಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪ ತಶೀಲ್ದಾರ್ ತುಳಜಾ ರಾಮ್ ಸಿಂಗ್ ಅವರು ಮಾತನಾಡಿದ್ದರು ಭಾರತಲ್ಲಿ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ದೇಶವನ್ನು ಪ್ರಗತಿ ಏಕತೆ ಮತ್ತು ಸಮಗ್ರತೆ ಮುನ್ನಡೆಸುವ ಪರಮೋಚ್ಚ ಶಕ್ತಿಯಾಗಿದೆ ನಾವೆಲ್ಲರೂ ಸಂವಿಧಾನವನ್ನು ನಿಷ್ಠೆಯಿಂದ ಪಾಲಿಸೋಣ ಗೌರವಿಸೋಣ ಮತ್ತು ದೇಶವನ್ನು ಮತ್ತಷ್ಟು ಬಲಪಡಿಸೋಣ ಎಂದಿರು

ನಂತರ ಮಾತನಾಡಿ ದ ದಲಿತ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷರಾದ ಶರಣಪ್ಪ ಕಟ್ಟಿಮನಿ ಮಾತನಾಡಿ
“ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಕರಡು ಸಮಿತಿ ಹಾಗೂ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ಮಹನೀಯರ ದೂರದೃಷ್ಟಿ, ತ್ಯಾಗ ಮತ್ತು ಅಪಾರ ಚಿಂತನೆಯ ಫಲವಾಗಿ ನಮಗೆ ಈ ಶ್ರೇಷ್ಠ ಸಂವಿಧಾನ ದೊರಕಿದೆ. 1949ರ ನವೆಂಬರ್ 26ರಂದು ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿತು. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದರೂ, ಅದರ ಮೌಲ್ಯಗಳನ್ನು ಸ್ವೀಕರಿಸಿ ಗೌರವಿಸುವ ಉದ್ದೇಶದಿಂದ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ,” ಎಂದರು.

ನಂತರ ಮಾತನಾಡಿದ ದಲಿತ ದಲಿತ ಸಂಘರ್ಷ ಸಮಿತಿಯ ಮುದಗಲ್ಲ ಅಧ್ಯಕ್ಷರಾದ ಬಸವರಾಜ ಬಂಕದಮನಿ
ಅವರು “ಕರ್ನಾಟಕದ ಸಾಮಾಜಿಕ ಸುಧಾರಣೆಯ ಇತಿಹಾಸಕ್ಕೂ ಸಂವಿಧಾನದ ಮೌಲ್ಯಗಳಿಗೂ ಅವಿನಾಭಾವ ಸಂಬಂಧವಿದೆ. ಬಸವಣ್ಣನವರ ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳು ಹಾಗೂ ಅನುಭವ ಮಂಟಪದ ಪ್ರಜಾಸತ್ತಾತ್ಮಕ ಚಿಂತನೆಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿವೆ. ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ; ಆದರೆ ಈ ಹಕ್ಕುಗಳನ್ನು ಉಳಿಸಿಕೊಳ್ಳಲು ನಾವೆಲ್ಲರೂ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ,” ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಕಂಪ್ಯೂಟರ್ ಆಪರೇಟರ್ ಮುನಿರ್ ಪಾಶ ಅವರು  ಭಾರತದ ಸಂವಿಧಾನದ ಪ್ರಸ್ತಾವನೆ ಯನ್ನು ಓದಿದರು

ಈ ಸಂದರ್ಭದಲ್ಲಿ ನಾಡಕಛೇರಿ ಯ ಕಂದಾಯ ನಿರೀಕ್ಷಕ ,
ವೆಂಕಟೇಶ್ ಹಿರೇಮನಿ, ಸಜೀವಕುಮಾರ, ಕಿರಣ, ಶಿವರಾಜ, ಸೇರಿದಂತೆ ಕಛೇರಿಯ ಹಾಗೂ ಸಿಬ್ಬಂದಿ ಹಾಜರಿದ್ದರು.

ವರದಿ :- ಮಂಜುನಾಥ ಕುಂಬಾರ 

Prajavikshane

Chandru R Bhanapaur

Leave a Reply

error: Content is protected !!