ಗಾವರಾಳ ಗ್ರಾಮದಲ್ಲಿ ವಾಂತಿ ಬೇಧಿ ಪ್ರಕರಣ: ಸ್ಥಳಕ್ಕೆ ತಹಶೀಲ್ದಾರ್, ಇಓ ಭೇಟಿ.


ಕುಕನೂರ : ತಾಲೂಕಿನ ಮಸಬಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾವರಾಳ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳು ಕಂಡು ಬಂದ ಪ್ರಯುಕ್ತ ಗ್ರಾಮಕ್ಕೆ ತಹಶೀಲ್ದಾರ್ ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳು ಭೇಟಿ ಪರಿಶೀಲನೆ ನೆಡೆಸಿದರು.
< ವಾಂತಿ ಬೇಧಿ ಪ್ರಕರಣಗಳು ಕಂಡುಬಂದ ಗ್ರಾಮದ ಕೆಲ ವಾರ್ಡಗಳಲ್ಲಿ ಸಂಚರಿಸಿ ಗ್ರಾಮಸ್ಥರ ಸಭೆ ನಡೆಸಿದ್ದಾರೆ. ಪ್ರಕರಣ ಕಂಡುಬಂದ ಮನೆಗಳಿಗೆ ಭೇಟಿ ನೀಡಿ ಕುಡಿಯೋ ನೀರಿನ ಸಂಪರ್ಕಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ತೆ, ಚರಂಡಿ ವ್ಯವಸ್ತೆಯನ್ನು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು ಕುಡಿಯೋ ನೀರು ಕಲುಷಿತ ಗೊಂಡಿರಬಹುದೆಂದು ನೀರನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಮತ್ತು ಎಲ್ಲರೂ ಕಡ್ಡಾಯವಾಗಿ ಕುಡಿಯಲು ಶುದ್ಧ ನೀರನ್ನು ಬಳಸುವಂತೆ ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನೀಲಪ್ರಭಾ ಬಬಲದ್, ತಾಲೂಕ ಪಂಚಾಯತ್ ಇಓ ರಾಮಣ್ಣ ದೊಡ್ಡಮನಿ, ತಾಲೂಕಾ ವೈಧ್ಯಾಧಿಕಾರಿಗಳಾದ ಸುಮಾ ಪಾಟೀಲ್, ಸಮುದಾಯ ವೈಧ್ಯಾಧಿಕಾರಿಗಳು ಮಸಬಹಂಚಿನಾಳ ಪ್ರಕಾಶ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೈಜನಾಥ ಸಾರಂಗಮಠ, ಕಾರ್ಯದರ್ಶಿಗಳಾದ ಶೇಕ್ರಪ್ಪ ಚಿಂಚಿಲಿ, ಕಂದಾಯ ನಿರೀಕ್ಷಕರಾದ ರಂಗನಾಥ ಬಂಡಿ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಇತರರಿದ್ದರು.

Leave a Reply

error: Content is protected !!