ಕುಕನೂರು: ತಾಲೂಕಿನ ಬೆಣಕಲ್ ನ ನೃಪತುಂಗ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಹೇಮಣ್ಣ ಎಚ್.ಎ ಅವರು ಇತ್ತೀಚಿಗೆ ವಯೋ ನಿವೃತ್ತಿ ಹೊಂದಿದ್ದು, 2000 ಇಸವಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗುರುವಂದನ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ಗುರುಗಳ ಪಾಠದ ಕ್ರಮ, ಅವರ ನಡವಳಿಕೆ, ಶಿಸ್ತು ಪ್ರತಿಯೊಂದನ್ನು ಎಲ್ಲರೂ ನೆನಪಿಸಿಕೊಂಡು, ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕರಾದ ಹೇಮಣ್ಣ ಮಾತನಾಡಿ ತಮ್ಮೆಲ್ಲರ ಪ್ರೀತಿ ವಿಶ್ವಾಸ ನನಗೆ ಖುಷಿ ತಂದಿದೆ. ಒಬ್ಬ ಶಿಕ್ಷಕನಾಗಿ ನಾನು ಏನು ಕೆಲಸ ಮಾಡಬೇಕಾಗಿತ್ತು, ಅದನ್ನು ನನ್ನ ಕರ್ತವ್ಯ ಎಂದು ಭಾವಿಸಿ ಮಾಡಿದ್ದೇನೆ. ಅದಕ್ಕೆ ಸನ್ಮಾನಿಸುವುದರ ಮೂಲಕ ವ್ಯಕ್ತಪಡಿಸಿರುವುದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಕ್ಕಾಗಿ ನಿಮ್ಮ ಪ್ರೀತಿಗೆ ಚಿರರುಣಿಯಾಗಿದ್ದೇನೆ ಎಂದು ಭಾವುಕರಾಗಿ ನುಡಿದರು. ಈ ಸಂದರ್ಭದಲ್ಲಿ ವಿಜಯಕುಮಾರ ಸೊಪ್ಪಿಮಠ, ಶಿವಾನಂದ, ಅಶೋಕ, ಸೋಮಶೇಖರ, ಮೈಲಾರಗೌಡ, ಶಿವಲೀಲಾ, ಭಾಗ್ಯಶ್ರೀ, ಮಂಜುಳಾ, ಪ್ರೇಮಾ, ಸುನಿತಾ ಮುಂತಾದವರಿದ್ದರು.