ಬೆಂಗಳೂರು : ದೇಶದ ಹಲವು ಪಕ್ಷಗಳ ನಾಯಕರೆಲ್ಲ ರಾಜ್ಯದಲ್ಲಿ ಒಂದೆಡರೆ ಸೇರಿದ್ದು, ಒಕ್ಕೂಟದ ಉದ್ದೇಶ ಹಾಗೂ ಗುರಿಗೆ ಸಂಬಂಧಿಸಿದಂತೆ ಸಾಮೂಹಿಕ ಸಂಕಲ್ಪವನ್ನು ಮಾಡಿದ್ದಾರೆ.
ದ್ವೇಷ ರಾಜಕಾರಣದ ವಿರುದ್ದ ಸಾಮೂಹಿಕ ಹೋರಾಟಕ್ಕೆ 26 ರಾಷ್ಟ್ರೀಯ ಪಕ್ಷಗಳ ಮುಖಂಡರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆಗೆ ನಿರ್ಣಯ ಮಾಡಿದ್ದಾರೆ. ಮಣಿಪುರದ ಗಲಭೆ ವಿಚಾರ ಕೂಡ ಸಾಮೂಹಿಕ ಸಂಕಲ್ಪ ದ ಸಮಯದಲ್ಲೇ ಪ್ರಸ್ತಾಪ ಮಾಲಾಯಿತು. ಅದಂಹಾಗೆ ಈ “ಮಹಾ ಮೈತ್ರಿ ಕೂಟ”ಕ್ಕೆ ಇವರು “ಇಂಡಿಯಾ” “INDIA” ಎಂದು ಹೆಸರ ಇಡಲಾಗಿದೆ.
“ಇಂಡಿಯಾ” “INDIA” ಎಂದರೆ : I ಎಂದರೆ ಭಾರತೀಯ (ಇಂಡಿಯನ್), N – ರಾಷ್ಟ್ರೀಯ (National), D- ಪ್ರಜಾಪ್ರಭುತ್ವವಾದಿ (Democtrotic), I- ಅಂತರ್ಗತ (Inclusive), A- ಮೈತ್ರಿ (Alliance).