LOCAL EXPRESS : ದೇವಸ್ಥಾನದ ಜಾಗೆಯಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ : ತಹಶೀಲ್ದಾರ್‌ಗೆ ಮನವಿ!

You are currently viewing LOCAL EXPRESS : ದೇವಸ್ಥಾನದ ಜಾಗೆಯಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ :  ತಹಶೀಲ್ದಾರ್‌ಗೆ ಮನವಿ!

ಕುಕನೂರ : ಕುಕನೂರು ಪಟ್ಟಣದ ಗುದ್ನೇಪ್ಪನಮಠದ ಶ್ರೀ ಗುದ್ನೇಶ್ವರ ದೇವಸ್ಥಾನದ ಜಮೀನು ಯಾವುದೇ ಸರ್ಕಾರಿ ಕಟ್ಟಡಗಳು ಹಾಗೂ ಕಛೇರಿಗೆ ಬಳಸಿಕೊಳ್ಳಬಾರದೆಂದು ಗುಡ್ಡೆಪ್ಪನಮಠದ ಗ್ರಾಮಸ್ಥರು ಇಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಪಟ್ಟಣದ ಗುಡ್ಡೆಪ್ಪನಮಠದ ಸರ್ವೆ ನಂಬರ್ 78ರ ಗುದ್ನೇಶ್ವರ ದೇವಸ್ಥಾನದ ಜಾಗವು 188 ಎಕರೆ ಇದ್ದು, ಈಗಾಗಲೇ ಇಲ್ಲಿ 45 ಎಕರೆ ನವೋದಯ ಶಾಲೆಯನ್ನು ಕಟ್ಟಿರುತ್ತಾರೆ. 6 ಎಕರೆಯನ್ನು ಐಟಿಐ ಕಾಲೇಜು ಇದ್ದು, ಮತ್ತು 3 ಎಕರೆ ಗುಂಟೆಯಲ್ಲಿ ವಾಟರ ಟ್ಯಾಂಕನ್ನು ಕಟ್ಟಿರುತ್ತಾರೆ. ಇನ್ನೂ ಉಳಿದ 35 ಎಕರೆಯಲ್ಲಿಗುದ್ನೇಪ್ಪನಮಠದ ಜನರು ವಾಸವಿದ್ದು (ಊರು ನಿರ್ಮಾಣ), ಒಟ್ಟು 188 ಎಕರೆಯಲ್ಲಿ ಉಳಿದ 45 ಎಕರೆ ಗುದ್ನೇಶ್ವರ ದೇವಸ್ಥಾನದ ದೇವಸ್ಥಾನದ ಪೂಜಾರಿಗಳಿಗೆ ಕೊಟ್ಟಿದ್ದು, ಆದರೆ, ಇದು ಕಾರ್ಯಗತಗೊಂಡಿಲ್ಲ ಸುಮಾರು 18 ಜನ ಸೇವಾದಾರರಿಗೆ (ಪೂಜಾರಿಗಳಿಗೆ) (ಭಜನಾ ಮಂಡಳಿ, ತೇರು ಕಟ್ಟುವವರು, ಸೇವಾ ಮಂಡಳಿ) 40 ಎಕರೆ ಜಾಗವನ್ನು ಕೊಡಬೇಕಾಗಿದೆ ಎಂದು ಗುದ್ನೇಪ್ಪನಮಠದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಈ ಹಿಂದೆ ತಾಲೂಕು ಘೋಷಣೆ ಆದ ನಂತರದಲ್ಲಿ ಹಲವು ಸರಕಾರಿ ಕಟ್ಟಡಗಳನ್ನು ಕಟ್ಟಲು ಗುದ್ನೇಶ್ವರ ದೇವಾಸ್ಥಾನದ ಜಮೀನನ್ನು ಗೊತ್ತು ಪಡೆಸಿದ್ದರು. ಆದರೆ, ಊರಿನ ಗ್ರಾಮಸ್ಥರೆಲ್ಲರು ಕೂಡಿ ಅದನ್ನು ತಡೆಹಿಡೆಯುತ್ತಾ ಬಂದಿದ್ದಾರೆ. ಇದೀಗ ದೇವಸ್ಥಾನದ ಅಭಿವೃದ್ಧಿ ಪಡಿಸುವ ಗೋಸ್ಕರ ಸ್ವಲ್ಪವೇ ಜಾಗವು ಉಳಿದಿದ್ದು, ಉಳಿದ ಜಾಗದಲ್ಲಿ ಹುಣಿಸೆ ಮರಗಳು ಹಾಗೂ ಬೆವಿನ ಮರಗಳು ಹಾಗೂ ಮಾವಿನ ಮರಗಳು ಇದ್ದಾವೆ. ಹಾಗಾಗಿ ಮತ್ತೆ ಯಾವುದೇ ಜಾಗವು ದೇವಾಸ್ಥಾನದ ಸುತ್ತಮುತ್ತಲು ಉಳಿದಿರುವುದಿಲ್ಲ’ ಎಂದು ಗುದ್ನೇಪ್ಪನಮಠದ ಗ್ರಾಮಸ್ಥ ವಾದವಾಗಿದೆ.

‘ಸದರಿ ನೀವುಗಳು ಸರಕಾರಿ ಕಟ್ಟಡಗಳನ್ನು ಕಟ್ಟಲು ಗುದ್ನೇಶ್ವರ ದೇವಸ್ಥಾನದ ಸರ್ವೆ ನಂಬರ್ 78ರಲ್ಲಿ ಜಾಗವನ್ನು ಗುರುತಿಸದ್ದಾರೆ. ಇದಕ್ಕೆ ಗ್ರಾಮಸ್ಥರ ವಿರೋಧವಿದ್ದು, ‘ನೀವು ಯಾವುದೇ ಸರಕಾರಿ ಸೌಲಭ್ಯಕ್ಕಾಗಿ ಉಪಯೋಗಿಸಬಾರದೆಂದು. ಈ ವಿಷಯವನ್ನು ನೀವು ಇಲ್ಲಿಗೆ ಕೈಬಿಡಬೇಕು ತಮ್ಮಲ್ಲಿ ಕಳಕಳಿಯ ವಿನಂತಿ, ಗುದೈಶ್ವರ ದೇವಸ್ಥಾನ ಇತಿಹಾಸವು ಸುಮಾರು 1200ವರ್ಷಗಳು ಇತಿಹಾಸ ವಿದ್ದು ಇಲ್ಲಿಯವರಿಗೂ ದೇವಸ್ಥಾನವು ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲಾ. ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಅತಿ ದೊಡ್ಡ ಜಾತ್ರೆ ಇದ್ದು ಇದು ಸುಮಾರು 1 ತಿಂಗಳ ಕಾಲ ನಡೆಯುತ್ತದೆ’

‘ಗುದ್ನೇಶ್ವರ ಜಾತ್ರೆಗೆ ಬಂದಂತಹ ಭಕ್ತಾದಿಗಳಿಗೆ ಯಾವುದೇ ರೀತಿಯ ಸೌಲಭ್ಯವಿರುವುದಿಲ್ಲ. ತಮ್ಮ ವಾಹವಗಳನ್ನು ನಿಲ್ಲುಗಡೆ ಮಾಡಲು ಕೂಡ ಜಾಗ ಇರುವುದಿಲ್ಲ. ಹಾಗೂ ಜಾಗದ ಅವಶ್ಯಕತೆ ಇರುತ್ತದೆ. ದಯಮಾಡಿ ತಾವುಗಳು ಇನ್ನೂ ಮುಂದಿನ ದಿನಗಳಲ್ಲಿ ಜಾತ್ರೆಯು ಹೆಚ್ಚಿನ ಜನಸಂಖ್ಯೆಯಲ್ಲಿ ಕೊಡುತ್ತಿದ್ದು ಜಾಗದ ತೊಂದರೆ ಯಾಗುತ್ತದೆ ಆದ ಕಾರಣ ನೀವು ಯಾವುದೇ ಸರಕಾರಿ ಕಟ್ಟಡಗಳನ್ನು ಈ ಜಾಗದಲ್ಲಿ ಹಾಕಬಾರದು’ ಎಂದು ಗುದ್ನೇಪ್ಪನಮಠದ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಬಂಡಿ, ರುದ್ರಯ್ಯ ವಿರುಪಣ್ಣನವರ್‌, ವಿರುಪಾಕ್ಷಯ್ಯ ಹುಣಿಸಿಮರದ್, ಶರಣಯ್ಯ ಹಳೆಮನಿ, ಶಿವು ಗಲಬಿ, ಶಶಿಕುಮಾರ ಓಲಿ, ಕೋಟ್ರೇಶ ಬಂಡಿ, ವಿರೇಶ್‌ ಹೊಸಮಠ, ಶರಣಯ್ಯ ಹುಣಿಸಿಮರದ್, ಸಂಗಯ್ಯ ಬಂಡಿ, ಪ್ರಭು ಕಟಗಿ ಹಾಗೂ ಗುದ್ನೇಪ್ಪನಮಠದ ಗ್ರಾಮಸ್ಥರು ಇದ್ದರು.

Leave a Reply

error: Content is protected !!