ಬೆಂಗಳೂರು: ಕನ್ನಡ ಚಿತ್ರರಂಗದ ನಟ ವಿಜಯ್ ರಾಘವೇಂದ್ರ ಪತ್ನಿ ನಿಧನರಾಗಿದ್ದಾರೆ. ಅವರಿಗೆ ವಿದೇಶದಲ್ಲಿ ಹೃದಯಘಾತವಾಗಿತ್ತು ಎನ್ನಲಾಗಿದೆ. ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಅವರು ನಿಧನರಾಗಿದ್ದಾರೆ. ಇಂದು ಹೃದಯಾಘಾತದಿಂದ ಸ್ಪಂದನ ಇಹಲೋಕ ತ್ಯಜಿಸಿದ್ದಾರೆ.
ನಿನ್ನೆ ಬ್ಯಾಂಕ್‌ಕನಲ್ಲಿ ಅವರಿಗೆ ಹೃದಯಘಾತವಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಅವರನ್ನು ಅಲ್ಲಿನ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಅಲ್ಲಿ ಅವರಿಗೆ ಚಿಕಿತ್ಸೆಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸದ್ಯ ಕುಟುಂಬ ಸದ್ಯಸರು ಬ್ಯಾಂಕ್‌ಕ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ನ ಟ ವಿಜಯ್ ರಾಘವೇಂದ್ರ ಅವರು 26 ಆಗಸ್ಟ್ 2007 ರಂದು, ಅವರು ಸಹಾಯಕ ಪೊಲೀಸ್ ಆಯುಕ್ತರಾದ ಬಿ.ಕೆ.ಶಿವರಾಂ ಅವರ ಪುತ್ರಿ ಸ್ಪಂದನಾ ಎಂಬ ತುಳು ಹುಡುಗಿಯನ್ನು ವಿವಾಹವಾದರು ದಂಪತಿಗೆ ಶೌರ್ಯ ಎಂಬ ಮಗನಿದ್ದಾನೆ.