ಕೊಪ್ಪಳ : ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಕೊಪ್ಪಳ ಕಾರ್ಯ ಮತ್ತು ಪಾಲನೆ ಉಪವಿಭಾಗದ ವ್ಯಾಪ್ತಿಯ 110ಕೆವಿ ಕುಷ್ಟಗಿ-ಬೇವೂರು ವಿದ್ಯುತ್ ಮಾರ್ಗದ ಟವರ್ ಸಂಖ್ಯೆ ಎ.ಪಿ.-4 ಹಾಗೂ ಎ.ಪಿ.-5ರಲ್ಲಿ ಸ್ಟ್ರೀಂಗಿಂಗ್ ಕಾಮಗಾರಿ, ತ್ರೈಮಾಸಿಕ ನಿರ್ವಾಹಣೆ ಕೆಲಸ ಹಾಗೂ ಲೈನ್ಸ್ ನಿರ್ವಾಹಣೆ ಕೆಲಸ ನಡೆಯುತ್ತಿರುವ ಪ್ರಯುಕ್ತ ಆಗಸ್ಟ್ 09ರಂದು ಬೆಳಿಗ್ಗೆ 10ರಿಂದ ಸಂಜೆ 04ಗಂಟೆಯವರೆಗೆ ಕೊಪ್ಪಳ ನಗರ ಮತ್ತು ಗ್ರಾಮೀಣ ಭಾಗದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜಸ್ಕಾಂ ತಿಳಿಸಿದೆ.
ಆ ದಿನ 110ಕೆವಿ ಉಪ-ಕೇಂದ್ರಗಳಾದ ಬೇವೂರು, ಚಿಲಕಮುಖಿ ಹಾಗೂ ಮಂಗಳೂರು, ಐ.ಪಿ.ಪಿ. ಗ್ರಾಹಕರಾದ, ಮಾಧವ ಸೊಲಾರ್, ಕವಿಟ್ ಸೊಲಾರ್, ನೆಲಜೇರಿ ಸೊಲಾರ್ ಮತ್ತು ಗುತ್ತೂರು ಸೊಲಾರ್ ರವರುಗಳಿಗೆ ಪರಿಮಾಣ ಬೀಳುತ್ತದೆ. ಕೊಪ್ಪಳ ನಗರ ಮತ್ತು ಗ್ರಾಮೀಣ ಭಾಗದಲ್ಲಿಯೂ ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ವಿದ್ಯುತ್ ವ್ಯತ್ಯಯಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದೆ.
ವಿದ್ಯುತ್ ನಿರ್ವಾಹಣೆ ಕೆಲಸವು ಬೇಗನೆ ಮುಕ್ತಾಯಗೊಂಡಿದ್ದಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್‌ನ್ನು ಪುನರ್ ಸ್ಥಾಪನೆ ಮಾಡಲಾಗುವುದು. ಆದ್ದರಿಂದ, ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ತಿ ಕೆಲಸ ಕಾರ್ಯಗಳನ್ನು ಮಾಡಬಾರದೆಂದು ಸ್ಪಷ್ಟವಾಗಿ ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ಯಾವುದೇ ವಿದ್ಯುತ್ ಅಪಘಾತ ಉಂಟಾಗಿದ್ದಲ್ಲಿ ಗು.ವಿ.ಸ.ಕಂಪನಿಯು ಜವಾಬ್ದಾರಾಗಿರುವುದಿಲ್ಲ ಎಂದು ಕೊಪ್ಪಳ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.