ಕುಕನೂರು : ಪಟ್ಟಣದ ಭೀಮಾಂಭಿಕ ದೇವಸ್ಥಾನದ ಹತ್ತಿರ ಕಾರ್ಯಾನಿರ್ವಹಿಸುತ್ತಿರುವ ತಹಶೀಲ್ದಾರ್ ಕಾರ್ಯಲಯವು ಇನ್ನು ಮುಂದೆ ಗುದ್ನೇಪ್ಪನಮಠ ರಸ್ತೆಯ ಬಸ್ ಡೀಪೋ ಹಿಂದುಗಡೆ ಇರುವ ಕನಕ ಪುರ ಭವನದಲ್ಲಿ ಕಾರ್ಯನಿರ್ವಹಿಸಿಲಿದೆ.
ಸದ್ಯ ಇರುವ ತಹಶೀಲ್ದಾರ್ ಕಾರ್ಯಲಯವು ಬಹಳ ಹಳೆಯ ಕಟ್ಟಡವಾಗಿದ್ದು, ಮತ್ತು ಕಟ್ಟಣದ ಒಳಾಂಗಣದಲ್ಲಿ ಹೊಂದಿಸಿರುವ ಪಿಓಪಿ ಶೀಟ್‌ಗಳು ಉದುರಿ ಬಿಳುತ್ತಿರುವುದರಿಂದ ಕಟ್ಟಡವನ್ನು ಸ್ಥಳಾಂತರಗೊಳಿಸಲಾಗುತ್ತಿದ್ದೆ ಎಂದು ಹೇಳಲಾಗುತ್ತಿದ್ದೆ.
ಈ ಕುರಿತು ತಹಶೀಲ್ದಾರ್ ಹೆಚ್. ಪ್ರಾಣೇಶ್ ಮಾತನಾಡಿ, ‘ಸಾರ್ವಜನಿಕರ ಹಿತ ದೃಷ್ಟಿಯಿಂದ ಹಾಗೂ ಪ್ರಸ್ತುತ ಇರುವ ಕಟ್ಟಡ ಸುಮಾರು ೨೫ ರಿಂದ ೩೦ ವರ್ಷ ಹಳೆಯದಾಗಿದ್ದು, ಪಿಓಪಿ ಶೀಟ್‌ಗಳು ಬಿಳುತ್ತಿರುವುದರಿಂದ ಕಛೇರಿಗೆ ಬರುವ ಸಾರ್ವಜನಿಕರಿಗೆ ಹಾಗೂ ಸಿಗ್ಬಂದಿ ವರ್ಗದವರಿಗೆ ತೊಂದರೆ ಆಗಬಾರದು ಎಂದು ತಾಲೂಕಾ ಆಡಲಿತ ಕಛೇರಿಯನ್ನು ಸ್ಥಳಾಂತರ ಮಾಡುತ್ತಿದ್ದೇವೆ. ಹೊಸ ಕಟ್ಟಡದಲ್ಲಿ ಇಂಟರ್‌ನೇಟ್ ಕನೇಕ್ಷಷನ್ ಇನ್ನು ಆಗಿರುವುದಿಲ್ಲ ಹಾಗಾಗಿ ಭೂಮಿ ಕೇಂದ್ರದ ಕಾರ್ಯಗಳು ಈಗಿರುವ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸಲಾಗುತ್ತಿದೆ. ಕಾಗದ ಪತ್ರಗಳ ಕೆಲಸಗಳು (ಬಸ್ ಡೀಪೋ ಹತ್ತಿರದ “ಕನಕ ಭವನ”) ಹೊಸ ಕಟ್ಟಡದಲ್ಲಿ ನಡೆಯುತ್ತಿದೆ’ ಎಂದು ಹೇಳಿದರು.
ವರದಿ : ಶರಣಯ್ಯ ತೋಂಟದಾರ್ಯಮಠ