ಎಷ್ಯಾ ಕಪ್ ಗೆ ಟೀಮ್ ಇಂಡಿಯಾ ಪ್ರಕಟ, ಕೆ ಎಲ್ ರಾಹುಲ್ ಕಂಬ್ಯಾಕ್.
ಈ ತಿಂಗಳ 30 ರಿಂದ ಆರಂಭವಾಗಲಿರುವ ಎಷ್ಯಾ ಕಪ್ ಗೆ ಎಕದಿನ ಭಾರತೀಯ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು ಕರ್ನಾಟಕದ ಸ್ಟಾರ್ ಆಟಗಾರ ಕೆ ಎಲ್ ರಾಹುಲ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.
ಇಂದು 17 ಆಟಗಾರರ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ರೋಹಿತ್ ಶರ್ಮಾ ನಾಯಕತ್ವದಲ್ಲಿ , ಹಾರ್ದಿಕ್ ಪಾಂಡ್ಯ ಉಪನಾಯಕ ಆಯ್ಕೆಯಾಗಿದ್ದಾರೆ.
ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಕೆ ಎಲ್ ರಾಹುಲ್ ಈಗ ಎಕದಿನ ಎಷ್ಯಾ ಕಪ್ ಗೆ ಮರಳಿ ತಂಡ ಸೇರಿಕೊಂಡಿದ್ದಾರೆ.
ತಿಲಕ್ ವರ್ಮಾ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಗೆ ಆಯ್ಕೆ ಆಗಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ತಂಡಲ್ಲಿರುವ ಇತರ ಸ್ಟಾರ್ ಆಟಗಾರರು. ಸಂಜು ಸ್ಯಾಮ್ ಸನ್ ಸ್ಟಾಂಡ್ ಬೈ ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.
ಏಷ್ಯ ಕಪ್ ಗೆ ಭಾರತ ತಂಡ :
ರೋಹಿತ್ ಶರ್ಮಾ ( ನಾಯಕ ), ಹಾರ್ದಿಕ್ ಪಾಂಡ್ಯ ( ಉಪನಾಯಕ ), ವಿರಾಟ್ ಕೊಹ್ಲಿ, ಶುಭ್ ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ಕೆ ಎಲ್ ರಾಹುಲ್, ಇಶಾನ್ ಕಿಶಾನ್,
ರವೀಂದ್ರ ಜಡೇಜಾ, ಶಾರ್ಧುಲ್ ಠಾಕೂರ್, ಅಕ್ಷರ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಭೂಮ್ರಾ, ಮೊಹ್ಮದ್ ಶಮಿ, ಮೊಹ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಸಂಜು ಸ್ಯಾಮ್ ಸನ್.