BIG BREAKING : ಹಾಲು ಉತ್ಪಾದಕ ರೈತರಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಮೇವಿನ ಬೀಜ ವಿತರಣೆ..!!

You are currently viewing BIG BREAKING : ಹಾಲು ಉತ್ಪಾದಕ ರೈತರಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಮೇವಿನ ಬೀಜ ವಿತರಣೆ..!!

ಕೋಲಾರ : ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಾಲು ಉತ್ಪಾದಕ ರೈತರಿಗೆ ಉತ್ತೇಜನ ನೀಡಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಹಸಿರು ಮೇವು ಬೆಳೆಯಲು ನೀರಿನ ಸೌಲಭ್ಯವುಳ್ಳ ಹಾಲು ಉತ್ಪಾದಕರಿಗೆ ಪ್ರತಿ ಎಕರೆಗೆ 3 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಬೀಜ ವಿತರಣೆಯಲ್ಲಿ ಶೇ.50ರಷ್ಟು ರಿಯಾಯಿತಿಯ ನಿರ್ಧಾರವನ್ನು ಕೋಚಿಮುಲ್ ಘಟಕವು ಕೈಗೊಂಡಿದೆ ಎಂದು ತಿಳಿದು ಬಂದಿದೆ.

BREAKING : ಪಡಿತರ ಚೀಟಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ..!!

ಈ ಕುರಿತು ಕೋಚಿಮುಲ್ ಅಧ್ಯಕ್ಷ ಕೆ.ವೈ ನಂಜೇಗೌಡ ಸಂಪೂರ್ಣ ಮಾಹಿತಿ ನೀಡಿದ್ದು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದಿಂದ ಹಸಿರು ಮೇವು ಬೆಳೆಯಲು ಹಾಲು ಉತ್ಪಾದಕ ರೈತರಿಗೆ ಪ್ರತಿ ಎಕರೆಗೆ 3 ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ ನೀಡುವುದಕ್ಕೆ ನಿರ್ಧರಿಸಲಾಗಿದೆ. ಈ ಮೂಲಕ ರೈತಪರ ತೀರ್ಮಾನ ಕೈಗೊಂಡ ರಾಜ್ಯದ ಮೊದಲ ಒಕ್ಕೂಟ ನಮ್ಮದಾಗಿದೆ ಎಂದು ಅವರು ಹೇಳಿದ್ದಾರೆ.

ಜಾಹೀರಾತು

BIG BREAKING : ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಭಾಜನರಾದ ಮಹಿಳಾ ಶಿಕ್ಷಕಿಯರು..!!

ಹಾಲು ಉತ್ಪಾದರಕರ ನೆರವಿಗೆ ಒಕ್ಕೂಟ ಬರಲು ನಮ್ಮ ನಿರ್ಧರಿಸಿದೆ. ಈ ಯೋಜನೆಯ ಅಡಿಯಲ್ಲಿ ಒಕ್ಕೂಟ ವ್ಯಾಪ್ತಿಯಲ್ಲಿ ಪ್ರತಿ ತಾಲೂಕಿಗೆ ಕನಿಷ್ಠ 250 ಎಕರೆ, ಗರಿಷ್ಠ ಎಷ್ಟು ಬೇಕಾದರೂ ಹಸಿರು ಮೇವು ಬೆಳೆಯುವಂತೆ ಅವಕಾಶ ಕಲ್ಪಿಸುವುದರಿಂದ ಅಂದಾಜು 2.5 ಕೋಟಿ ವರೆಗೆ ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

CRICKET NEWS : ಭಾರತಕ್ಕೆ 10 ವಿಕೆಟ್ ಗಳ ಭರ್ಜರಿ ಜಯ..!!

ರಾಜ್ಯ ವ್ಯಾಪ್ತಿಯ 14 ಹಾಲು ಒಕ್ಕೂಟಗಳ ಪೈಕಿ ಕೋಚಿಮುಲ್ ನಿಂದ ಮೊಟ್ಟ ಮೊದಲ ಬಾರಿಗೆ ಹಾಲು ಉತ್ಪಾದಕ ರೈತರಿಗೆ ಹಸಿರು ಮೇವು ಬೆಳೆಯಲು ನೀರಿನ ಸೌಲಭ್ಯವುಳ್ಳವರಿಗೆ ಪ್ರತಿ ಎಕರೆಗೆ 3000 ರೂ ಪ್ರೋತ್ಸಾಹಧನ, ಶೇ.50ರಷ್ಟು ರಿಯಾಯಿತಿ ದರದಲ್ಲಿ ಮೇವಿನ ಬೀಜ ವಿತರಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.

Leave a Reply

error: Content is protected !!