- ಗೃಹ ರಕ್ಷಕ ದಳದ ( ಹೋಂಗಾಡ್೯) ಕಲಬುರಗಿ ಜಿಲ್ಲಾ ಸಮಾದೇಷ್ಠ ಸಂತೋಷಕುಮಾರ ಪಾಟೀಲ್ ಅವರಿಗೆ ಇಂದು 2022ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಕಲಬುರಗಿಯ ಹೋಂಗಾಡ್೯ ಕಮಾಂಡೆಂಟ್ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಪಾಟೀಲ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಿದರು.
ಗೃಹ ರಕ್ಷಕ ಮತ್ತು ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಒಟ್ಟಾರೆ 17 ಅಧಿಕಾರಿ-ಸಿಬ್ಬಂದಿಯವರಿಗೆ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದು, ಅವರಲ್ಲಿ ಸಂತೋಷಕುಮಾರ ಪಾಟೀಲ ಅವರು ಒಬ್ಬರಾಗಿದ್ದಾರೆ. ದೇಶದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಚಿನ್ನದ ಪದಕ ಪ್ರಕಟಿಸಲಾಗಿತ್ತು.
ಕಳೆದ ಐದು ವರ್ಷಗಳಿಂದ ಗೃಹ ರಕ್ಷಕ ದಳದ ಕಲಬುರಗಿ ಜಿಲ್ಲಾ ಸಮಾದೇಷ್ಟ (ಹೋಂಗಾಡ್೯ ಕಮಾಂಡೆಂಟ್) ರಾಗಿ ಸೇವೆ ಸಲ್ಲಿಸುತ್ತಿರುವ ಸಂತೋಷಕುಮಾರ ಪಾಟೀಲ್ ಅವರು ಕೊರೋನಾ ವೇಳೆಯಲ್ಲಿ ಅಮೋಘ ಸೇವೆ, ಹೋಂಗಾಡ್೯ ಸೇವೆ ಬಲಪಡಿಸಿರುವುದು ಜೊತೆಗೇ ಹೋಂಗಾಡ್೯ ಸಂಖ್ಯೆ ಹೆಚ್ಚಿಸಿರುವುದರಿಂದ ಸರ್ಕಾರ ಅವರ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಗಳ ಚಿನ್ನದ ಪದಕ ಗೌರವ ನೀಡಿ ಗೌರವಿಸಿದೆ.