ರಾಜ್ಯಮಟ್ಟಕ್ಕೆ ಆಯ್ಕೆಯಾದ ಬೇತಲ್ ಕಾಲೇಜಿನ ಕ್ರೀಡಾಪಟುಗಳು

You are currently viewing ರಾಜ್ಯಮಟ್ಟಕ್ಕೆ ಆಯ್ಕೆಯಾದ ಬೇತಲ್  ಕಾಲೇಜಿನ ಕ್ರೀಡಾಪಟುಗಳು

ಗಂಗಾವತಿ : ಕಳೆದ ಅಕ್ಟೋಬರ್ 02 ರಂದು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ಕೊಪ್ಪಳ ಇವರ ನೇತೃತ್ವದಲ್ಲಿ ಶ್ರೀ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜು, ಶ್ರೀ ರಾಮನಗರ ಮತ್ತು ಗಂಗಾವತಿ ಇವರ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು.

ಈ ಕ್ರೀಡಾಪಟುದಲ್ಲಿ ಬೇತಲ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಿ ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಕುಸ್ತಿ : ಕ್ರೀಡೆಯ ( ಫ್ರೀ ಸ್ಟೈಲ್ ಮತ್ತು ಗ್ರಿಕ್ ರೋಮನ್) ವಿಭಾಗದಲ್ಲಿ ಅಜಯ ಕುಮಾರ -57 KG ವಿಭಾಗದಲ್ಲಿ ಪ್ರಥಮ,ರೋಹಿತ್ -57 KG ದ್ವಿತೀಯ, ಬಸವರಾಜ -70 KG ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ಐಶ್ವರ್ಯ -50 KG ವಿಭಾಗದಲ್ಲಿ ಪ್ರಥಮ, ಸಾವಿತ್ರಿ -53 KG ಪ್ರಥಮ, ಭಾನುಪ್ರಿಯಾ -67 KG ಪ್ರಥಮ, ದೇವಮ್ಮ -55 KG ದ್ವಿತೀಯ, ಪಡೆದಿರುತ್ತಾರೆ.

ಕರಾಟೆ : ಕುಮಿಟೆ (ಫೈಟ್) ವಿಭಾಗದಲ್ಲಿ ಅಜಯಕುಮಾರ -54 KG ವಿಭಾಗದಲ್ಲಿ ಪ್ರಥಮ, ಪವನ್ -66 KG ಪ್ರಥಮ, ಬಸವರಾಜ -70 KG ಪ್ರಥಮ, ಪೃಥ್ವಿರಾಜ್ + 82 KG ಪ್ರಥಮ, ಬಾಲಕಿಯರ ವಿಭಾಗದಲ್ಲಿ ಐಶ್ವರ್ಯ -48 KG ವಿಭಾಗದಲ್ಲಿ ಪ್ರಥಮ, ಸಾವಿತ್ರಿ -52 KG ಪ್ರಥಮ, ಭವಾನಿ -68 KG ಪ್ರಥಮ, ಭಾನುಪ್ರಿಯಾ -68 KG ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಟೇಕ್ವಾಂಡೋ :(ಫೈಟ್) ವಿಭಾಗದಲ್ಲಿ ರೋಹಿತ್ 57 ರಿಂದ 59 KG ವಿಭಾಗದಲ್ಲಿ ಪ್ರಥಮ, ಪವನ್ 63 ರಿಂದ 68 KG ಪ್ರಥಮ, ಬಸವರಾಜ 68 ರಿಂದ 73 KG ಪ್ರಥಮಸ್ಥಾನ ಪಡೆದಿರುತ್ತಾರೆ.

*ಸ್ವಿಮ್ಮಿಂಗ್:ಫ್ರೀಸ್ಟೈಲ್ ವಿಭಾಗದಲ್ಲಿ ಅಜಯ್ ಕುಮಾರ್ -ಪ್ರಥಮಸ್ಥಾನ , ಸಂತೋಷ್ ಪ್ರಥಮ, ಸಾವಿತ್ರಿ -ಪ್ರಥಮ, ದೇವಮ್ಮ -ಪ್ರಥಮ ಸ್ಥಾನ ಪಡೆದಿರುತ್ತಾರೆ.

ಈ ವೇಳೆಯಲ್ಲಿ BCFA ಅಧ್ಯಕ್ಷರು ಮಾತನಾಡಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಕೌಶಲ್ಯಗಳ ಮೂಲಕ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದ್ದು ವಿಜೇತರಾಗಿರುವಂತಹ ಕ್ರೀಡಾಪಟುಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯ ಪರವಾಗಿ ಅಭಿನಂದಿಸಿ ರಾಜ್ಯಮಟ್ಟದಲ್ಲಿ ಜಯಗಳಿಸಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ BCFA ಅಧ್ಯಕ್ಷರಾದ ಬ್ರೆಜಿಲಿಯಲ್ ಜೋಸೆಫ್ ರಾಜು, ಆಡಳಿತ ಅಧಿಕಾರಿಗಳಾದ ಶ್ರೀ ಮತಿ ಹೇಮಾ ಸುಧಾಕರ್ , ಸದಸ್ಯರಾದ ಶ್ರೀಮತಿ ಸುಜಾತ ರಾಜು , ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ್ ಬಿಂಗಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಮನೋಜ ಸ್ವಾಮಿ ಹಿರೇಮಠ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪಾವತಿ , ಉಪನ್ಯಾಸಕರಾದ ಬಸವರಾಜ ಕೆ. ತರಬೇತುದಾರರಾದ ಬಾಬುಸಾಬ್ ರೊಂದಿಗೆ ಮತ್ತಿತರರು ಹಾಜರಾರಿದ್ದರು.

Leave a Reply

error: Content is protected !!