ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ರದ್ದು


ಬೆಂಗಳೂರು: ಭಾರತೀಯ ನೈರುತ್ಯ ರೈಲ್ವೆ ಇಲಾಖೆಯಿಂದ ವಿವಿಧ ಕಾರಣಗಳಿಂದಾಗಿ ಕೆಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಅದು ಅಲ್ಲದೇ ಕೆಲ ರೈಲುಗಳ ಸೇವೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ನೈರುತ್ಯ ರೈಲ್ವೆ ಇಲಾಖೆಯಿಂದ ಇದೀಗ ಪ್ರಕಟಣೆಯಾಗಿದ್ದು, ತಾವರಗಟ್ಟಿ & ಮುಗದ ಮಧ್ಯ ಸಿಗ್ನಲ್ ಸಂಬಂಧಿತ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ರದ್ದುಗೊಳಿಸಿ, ಭಾಗಶಃ ರದ್ದುಗೊಳಿಸಿದೆ ಹಾಗೂ ಕೆಲವು ರೈಲುಗಳನ್ನು ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತದೆ ಎಂದು ಹೇಳಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ ಅಂತಿವೆ.

* ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ –ಮೀರಜ್ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಏಪ್ರಿಲ್ 4 ರಂದು ರದ್ದುಗೊಳಿಸಲಾಗಿದೆ.

* ರೈಲು ಸಂಖ್ಯೆ 17331/17332 ಮೀರಜ್ –ಎಸ್‌.ಎಸ್‌.ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ & 07351 ಮೀರಜ್ –ಲೋಂಡಾ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಏಪ್ರಿಲ್ 5 ರಂದು ರದ್ದುಗೊಳಿಸಲಾಗಿದೆ.

* ಏಪ್ರಿಲ್ 4 ರಂದು ಸಿಕಂದರಾಬಾದ್ ನಿಲ್ದಾಣದಿಂದ ಹೊರಡುವ ರೈಲುಗಾಡಿ ಸಂಖ್ಯೆ 07336 ಸಿಕಂದರಾಬಾದ್ – ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಧಾರವಾಡ-ಬೆಳಗಾವಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಧಾರವಾಡದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ ಎಂದು ತಿಳಿಸಿದೆ.

Leave a Reply

error: Content is protected !!