ಕುಕನೂರ : 2023-24ನೇ ಸಾಲಿನ ಸ್ವಚ್ಛ ಭಾರತ್ ಮಿಷನ್ (ನಗರ) 2.0 ಅಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಕುಕನೂರ ಪಟ್ಟಣಕ್ಕೆ 54 ವೈಯಕ್ತಿಕ ಶೌಚಾಲಯದ ಗುರಿ ನೀಡಿದ್ದು, ಕುಕನೂರ ಪಟ್ಟಣದ ವ್ಯಾಪ್ತಿಯಲ್ಲಿ ವೈಯಕ್ತಿಕ ಶೌಚಾಲಯ ಹೊಂದದೇ ಇರುವ ಫಲಾನುಭವಿಗಳು ತಮ್ಮ ಸ್ವಂತ ಜಾಗೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಫಲಾನುಭವಿಗಳು 7 ದಿನದೊಳಗಾಗಿ ಕಛೇರಿಯಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಪಡಿತರ ಚೀಟಿ, ಬ್ಯಾಂಕ ಪಾಸ್ ಪುಸ್ತಕ, ಅರ್ಜಿದಾರ ಭಾವಚಿತ್ರ, ಆಸ್ತಿ ದಾಖಲಾತಿ ಮತ್ತು ಶೌಚಾಲಯ ನಿರ್ಮಾಣ ಜಾಗದ ಡಿಜಿಟಲ್ ಪೋಟೋ, ಫಲಾನುಭವಿಗಳ ಮೊಬೈಲ್ ಸಂಖ್ಯೆಯೊAದಿಗೆ ಕಛೇರಿಗೆ ಸಲ್ಲಿಸಬೇಕು ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.