ಕುಕನೂರು: ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ರಮಾಬಾಯಿ ಅಂಬೇಡ್ಕರ್ ಶಾಲೆಯ ಶಿಕ್ಷಕ ಶಾಂತವೀರಪ್ಪ ಬನ್ನಿಕೊಪ್ಪ (46) ಶಾಂತವೀರಪ್ಪ ಸಾವನ್ನಪ್ಪಿದ್ದಾರೆ.
ಅಪಘಾತ ಆದ ವೇಳೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆ ಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರಿಗೆ ತಂದೆ, ತಾಯಿ, ಪತ್ನಿ, ಮೂವರು ಪುತ್ರಿಯರು ಅಪಾರ ಬಂದು ಬಳಗ ಇದ್ದಾರೆ. ಶಿಕ್ಷಕ ಶಾಂತವೀರಪ್ಪ ಬನ್ನಿಕೊಪ್ಪ ವಿಜ್ಞಾನ ಶಿಕ್ಷಕರಾಗಿದ್ದು, ಕಲಾವಿದರೂ ಸಹ ಆಗಿದ್ದರು. ಸಾಬೂನಿನಲ್ಲಿ ಹಾಗು ಕಚ್ಚಾ ವಸ್ತುವಿನಲ್ಲಿ ಕಲಾಕೃತಿ ನಿರ್ಮಿಸುತ್ತಿದ್ದರು. ನಾನಾ ಕವನ ಸಂಕಲನ ಸಹ ಬರೆದಿದ್ದರು. ಸದಾ ಚಟುವಟಿಕೆ ಇಂದ ಇಡೀ ತಾಲೂಕಿನಲ್ಲಿಯೇ ಚಿರಪರಿತರಾಗಿದ್ದರು.
ರಸ್ತೆ ಅಪಘಾತ ಯಾವ ರೀತಿ ಸಂಭವಿಸಿದೆ ಎಂಬುದು ಇನ್ನೂ ವರೆಗೂ ತಿಳಿದುಬಂದಿಲ್ಲ ಎಂದು ಹೇಳಲಾಗುತ್ತಿದೆ.