ವಿಷಯ ಸಂಗ್ರಹ & ವರದಿ : ಚಂದ್ರು ಆರ್ ಭಾನಾಪೂರ್
ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರ ಎನ್ನುವುದು ದೊಡ್ಡ ಹಾಗೂ ಮಹತ್ವದ ಜವಾಬ್ದಾರಿಯಾಗಿದೆ. ಹಾಗಾಗಿ, ಸರಕಾರದಿಂದ ಈ ಹುದ್ದೆಗೆ ಯಾವುದೇ ವೇತನ ಮುಟ್ಟುವುದಿಲ್ಲ’ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಘೋಷಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BIG BREAKING : ಬಿಜೆಪಿ ನಾಯಕರಲ್ಲಿ ವಿನಂತಿ ಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ..!!, ಯಾಕೆ ಗೊತ್ತ?
ನಗರದಲ್ಲಿ ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದ ಅವರು, ‘ಅಸಮಾಧಾನ ಶಮನ ಮಾಡುವ ಉದ್ದೇಶದಿಂದ ನನಗೆ ಆರ್ಥಿಕ ಸಲಹೆಗಾರ ಹುದ್ದೆ ನೀಡಿದ್ದಾರೆಂದು ಅನಿಸುವುದಿಲ್ಲ. ಯಾಕೆಂದರೆ, ನನಗೆ ಯಾವುದೇ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದರು. ಕುಮಾರಸ್ವಾಮಿ ವ್ಯಂಗ್ಯವಾಗಿ ಮಾತನಾಡುವುದು ಬಿಡಬೇಕು. ಈ ಬಗ್ಗೆ ಕುಮಾರಸ್ವಾಮಿ ಕೂರಲಿ, ಚರ್ಚೆ ಮಾಡಲಿ. ಪ್ರತಿಯೊಬ್ಬರಿಗೂ ಅವರದೇ ಆದ ನೈಪುಣ್ಯತೆ ಇರುತ್ತದೆ. ಹಾಗೆಲ್ಲ ಹಗುರವಾಗಿ ಮಾತಾಡ ಬಾರದು ಎಂದ ಅವರು. ನನ್ನ ಮಟ್ಟಿಗೆ ಇದೊಂದು ಉದ್ಯೋಗವಲ್ಲ. ನಾನು ಶಾಸಕನಾದಾಗಲೂ ವೇತನ ತೆಗೆದುಕೊಂಡಿಲ್ಲ. ಈಗಲೂ ವೇತನ ತೆಗೆದುಕೊಳ್ಳಲ್ಲ’ ಎಂದು ಹೇಳಿದ್ದಾರೆ.