ಯಲಬುರ್ಗಾ
ತಾಲೂಕಿನ ಬೇವೂರು ಪೋಲಿಸ್ ಠಾಣಾ ವ್ಯಾಪ್ತಿಯ ಹುಣಸಿಹಾಳ ಗ್ರಾಮದ ೩೮ ವರ್ಷದ ಶರಣಪ್ಪ ತಂದೆ ಯಮನಪ್ಪ ಮೂಗತಿ ಎಂಬ ವ್ಯಕ್ತಿ ಕಾಣೆಯಾಗಿದ್ದು, ಕಾಣೆಯಾದ ವ್ಯಕ್ತಿಯ ಚಹರೆ ಈ ರೀತಿಯಾಗಿದ್ದು ೫.೮ ಇಂಚು ಎತ್ತರ, ಸದೃಢ ಮೈಕಟ್ಟು, ಕನ್ನಡ ಮತ್ತು ಹಿಂದಿ ಭಾಷೆಯನ್ನು ಬಲ್ಲವನಾಗಿದ್ದು ಹೊಂಡಾ ಶೈನ್ ಬೈಕ್‌ನೊಂದಿಗೆ ಕಾಣೆಯಾದ ಕುರಿತು ಆತನ ಕುಟುಂಬಸ್ಥರು ಮಾಹಿತಿ ನೀಡಿದ್ದು ಈ ಪ್ರಕರಣ ದಾಖಲಾಗಿರುತ್ತದೆ. ಈ ವ್ಯಕ್ತಿಯ ಮಾಹಿತಿ ತಿಳಿದು ಬಂದಲ್ಲಿ ಕೂಡಲೇ ಸ್ಥಳೀಯ ಠಾಣೆಗೆ ಮಾಹಿತಿ ನೀಡು ಪತ್ತೆಗೆ ಸಹಕರಿಸುವಂತೆ ಬೇವೂರು ಪೋಲಿಸ್ ಠಾಣಾ ಅಧಿಕಾರಿಗಳು ಕೋರಿದ್ದಾರೆ