ಕುಕನೂರು : ರೈತ ಸಂಪರ್ಕ ಕೇಂದ್ರ ಕುಕನೂರು ವತಿಯಿಂದ ಹಾಗೂ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ಕಡಲೆ ಬೆಳೆ ಕ್ಷೇತ್ರೋತ್ಸವ
& ಆತ್ಮ ಯೋಜನೆಯಡಿ. ರೈತರಿಗೆ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು.
ತಾಲೂಕಿನ
ರಾಜೂರು ಗ್ರಾಮದ ಗೂಳಪ್ಪ ಅಯ್ಯಪ್ಪ ರಡ್ಡೇರ ಇವರ ಹೊಲದಲ್ಲಿ ಕಡಲೆ ಬೆಳೆ ಕ್ಷೇತ್ರೋತ್ಸವ ಕಾಯ೯ಕ್ರಮ & ಕ್ಷೇತ್ರ ಪಾಠ ಶಾಲೆ ಮಂಗಳವಾರ ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ
ರೈತ ಗೀತೆಯೊಂದಿಗೆ ಅನ್ನದಾತನ ಸ್ಮರಿಸಲಾಯಿತು.
ಎನ್.ಎಫ್.ಎಸ್.ಎಂ ಯೋಜನೆಯ ತಾಂತ್ರಿಕ ಸಹಾಯಕರು ಮಾರುತಿ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರೋತ್ಸವ ಹಾಗೂ ಪ್ರಾತ್ಯಕ್ಷಿಕೆಯ ಮಹತ್ವ ಹಾಗೂ ತಾಂತ್ರಿಕ ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ರವಿತೇಜ ಅಬ್ಬಿಗೇರಿ ಅವರು ರೈತರಿಗೆ ಉತ್ತಮ ಇಳುವರಿ ತೆಗೆಯುವ ತಾಂತ್ರಿಕ ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ್ ಮಾತನಾಡಿ ಇಲಾಖೆಯ ಯೋಜನೆಗಳ ಕುರಿತು ಹಾಗೂ ಸಿರಿಧಾನ್ಯಗಳ ಕುರಿತು ಬೆಳೆ ಸಮೀಕ್ಷೆ. ಬೆಳೆ ವಿಮೆ ಹಾಗೂ ಕೃಷಿ ಭಾಗ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ
ಪ್ರಗತಿ ಪರ ರೈತರಾದ ದತ್ತುರಾವ್ ಕಡಲೆ ಬೆಳೆ ಅಧಿಕ ಇಳುವರಿ ತೆಗೆಯುವ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಪ್ರಮುಖರಾದ ವಿಜಯಕುಮಾರ ಮಾದಿನೂರ, ಸಂಗಣ್ಣ ಅಂಗಡಿ, ಬಾಳಪ್ಪ ಚಿಲಕಮುಖಿ, ಸಹಾಯಕ ಕೃಷಿ ಕೃಷಿ ಅಧಿಕಾರಿ ಸಿದ್ರಾಮ ರೆಡ್ಡಿ, ಸಹಾಯಕ ಕೃಷಿ ಅಧಿಕಾರಿ ಬಸಲಿಂಗಪ್ಪ, ಆತ್ಮಾ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಗೂಳಪ್ಪ , ಮಹಮ್ಮದ ಇಕ್ಬಾಲ್ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ವಗ೯ದವರು ಪ್ರಗತಿ ಪರ ರೈತರು ಉಪಸ್ಥಿತರಿದ್ದರು.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕಡಲೆ ಬೆಳೆಯಲ್ಲಿ ಕ್ಷೇತ್ರೋತ್ಸವ ಹಾಗೂ ಆತ್ಮ ಯೋಜನೆಯಡಿ ಕ್ಷೇತ್ರ ಪಾಠ ಶಾಲೆ
