ಕುಕನೂರು : ಭಾರತ ಸಂವಿಧಾನವು ವಿಶ್ವಕ್ಕೆ ಮಾದರಿಯಾದ ಸಂವಿಧಾನವಾಗಿದೆ ಎಂದು ಕುಕನೂರು ತಹಶೀಲ್ದಾರ್ ಎಚ್ ಪ್ರಾಣೇಶ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಲಯದಲ್ಲಿ ಪಟ್ಟಣ ಪಂಚಾಯತ ಹಾಗೂ ತಾಲೂಕ ಪಂಚಾಯತ ಹಾಗೂ ತಾಲೂಕ ಆಡಳಿತದ ವತಿಯಿಂದ ನೆಡೆದ 75ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೆರಿಸಿ ಬಳಿಕ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಉದ್ದೇಶದೊಂದಿಗೆ ರಚಿತವಾದ ನಮ್ಮ ಭಾರತದ ಸಂವಿಧಾನದವು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದ ಹಕ್ಕುಗಳನ್ನು ಪಡೆದುಕೊಳ್ಳುವಾಗ ನಾವೂ ನಮ್ಮ ಕರ್ತವ್ಯಗಳನ್ನು ಮರೆಯಬಾರದು ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ನಿವೃತ್ತ ಉಪನ್ಯಾಸಕರಾದ ರವಿತೇಜ ಅಬ್ಬಿಗೇರಿ ಉಪನ್ಯಾಸ ನೀಡಿದರು.
ಪ್ರಮುಖರಾದ ರಸೀದಸಾಬ ಹಣಜಗೇರಿ ಮಾತನಾಡಿ ರಾಷ್ಟಿçÃಯ ಹಬ್ಬದಂತ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸುವಿಕೆಯನ್ನು ಹೆಚ್ಚಿಸಲು ತಾಲೂಕ ಆಡಳಿತ ಹಾಗೂ ಸ್ಥಳೀಯ ಆಡಳಿತಗಳು ಮುತುವರ್ಜಿ ವಹಿಸಬೇಕು ಎಂದರು.
ಬಳಿಕ ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ತಾಲೂಕ ಆಡಳಿತದ ವತಿಯಿಂದ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಮುರಳಿಧರರಾವ್ ಕುಲಕರ್ಣಿ, ಪಪಂ ಮುಖ್ಯಾಧಿಕಾರಿ ಪಿ.ಸುಬ್ರಮಣ್ಯ, ಆನಂದ ಗೂಡೂರು, ಎನ್,ಟಿ, ಸಜ್ಜನ್, ಶಿರಸ್ತೆದಾರ ಸುರೇಶ ಬಾಳೆಹೊಸೂರು, ಮುಸ್ತಾಪ್, ಕಂದಾಯ ನೀರಿಕ್ಷಕ ರಂಗನಾಥ ಬಂಡಿ, ಸುರೇಶ ಕ್ಯಾದಗುಂಪಿ ಹಾಗೂ ಪ್ರಮುಖರಾದ ದಳಪತಿ ವೀರಯ್ಯ ತೋಂಟದಾರ್ಯಮಠ, ಸಿಆರ್‌ಪಿ ಫೀರಸಾಬ ದಪೇದಾರ್, ನೂರಅಮ್ಮದ್ ಗುಡಿಹಿಂದಲ್, ತಹಶೀಲ್ದಾರ್ ಕಾರ್ಯಲಯದ ಸಿಬ್ಬಂದಿಗಳು ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಹಾಗೂ ಇತರರಿದ್ದರು.