ಕುಷ್ಟಗಿ : ಇದೇ ಫೆಬ್ರವರಿ 15 ರಂದು ಬಂಜಾರ ಸಮಾಜದ ಸಂತ ಶ್ರೀ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಇದ್ದು, ಈ ಪ್ರಯಕ್ತ ತಾಲೂಕಿನ ಕೆ ಬೋದುರತಾಂಡದಲ್ಲಿ ಸಂತ ಶ್ರೀ ಸೇವಾಲಾಲ್ ಜಯಂತಿಯ ಅಂಗವಾಗಿ ಊರಿನ ಜನರು ತಮ್ಮ 20ನೇ ವಷ೯ದ ಮಾಲಾಧಾರಿಗಳ ಮಹಾ ಭೋಗ ಪೂಜೆ ನೇರವೆರಿಸಲಾಯಿತು.
ಗುರುಮಹಾರಾಜರು ರಾಮಣ್ಣ ರಾಠೋಡ ಮತ್ತು ಅಮರೇಶ ರಾಠೋಡ ಇವರ ನೇತ್ರತ್ವದಲ್ಲಿ ಮಾಲಾಧಾರಿಗಳು ಮಾಲೆ ಧರಿಸಿಕೊಂಡರು, ಶ್ರೀ ಸೇವಾಲಾಲ್ ಮಂದಿರದಲ್ಲಿ ಹೋಮ ಹವನ ಮತ್ತು ಮಹಾ ಭೋಗ ಕಾಯ೯ಕ್ರಮ ನಡೆಯಿತು. ಈ ವೇಳೆ ಊರಿನ ಹಿರಿಯರು ಶಿವಪ್ಪ ನಾಯಕ ಅಮರೇಶ ರಾಠೋಡ ಶ್ರೀ ನಿವಾಸ ಚವ್ಹಾಣ ಮತ್ತು ಊರಿನ ಗುರುಹಿರಿಯರು ಭಾಗವಹಿಸಿದರು.