ಕುಕನೂರು : ಶಿಕ್ಷಣವೆಂದರೆ ಕೇವಲ ಓದು ಬರೆಯುವುದನ್ನು ಕಲಿಯುವುದಲ್ಲ ಅದು ವ್ಯಕ್ತಿಯಲ್ಲಿ ವಿಷಯ ಜ್ಞಾನವನ್ನು ಒಡ ಮೂಡಿಸುವುದು ಎಂದು ನಿವೃತ್ತ ಉಪನ್ಯಾಸಕ ಕೆ. ಆರ್ ಕುಲಕರ್ಣಿ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಸರಸ್ವತಿ ಪೂಜಾ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ವರ್ತನೆ, ನಡುವಳಿಕೆ, ಬದುಕುವ ಕಲೆ, ಕೌಶಲ್ಯ, ಮೌಲ್ಯಗಳು, ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ ಮತ್ತು ಜೀವನ ನಿರ್ವಹಣೆಯ ಮೌಲ್ಯಗಳನ್ನು ಮನದಲ್ಲಿ ಬಿತ್ತಿ ಪರಿಪೂರ್ಣ ಮಾನವನ್ನಾಗಿ ನಿಜವಾದ ಶಿಕ್ಷಣದ ಗುರಿಯಾಗಬೇಕು ಎಂದರು.
ವಿದ್ಯಾರ್ಥಿಗಳು ಕೇವಲ ಪದವಿ, ಅಂಕ ಮತ್ತು ಯಾವುದೇ ಶಿಕ್ಷಣ ಪಡೆದರೂ ಸಾಲದು. ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಜೀವನದಲ್ಲಿ ಯಶಸ್ಸು ಪಡೆಯಲು ಬೇಕಾದ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು ಎಂದರು.
ಸಿಡಿಸಿ ಕಮಿಟಿಯ ಉಪಾಧ್ಯಕ್ಷ ಶ್ರೀನಿವಾಸರಾವ್ ದೇಸಾಯಿ, ಪ್ರಾಚಾರ್ಯ ಈಶಪ್ಪ ಮಳಗಿ, ನಿಂಗಪ್ಪ ಕಂಬಳಿ, ಬರಮಪ್ಪ ತಳವಾರ್, ಕಾರ್ತಿಕ್ ಜಾದವ್, ಶರಣಯ್ಯ ಶಶಿಮಠ, ಶಂಕ್ರಪ್ಪ ಹಡಪದ, ಮಂಜುನಾಥ್ ಅಂಗಡಿ ಇದ್ದರು.